ಶುರುವಾಯ್ತು ದಂಡುಪಾಳ್ಯ-3 ಸಿನಿಮಾದ ಶೂಟಿಂಗ್ : ಮತ್ತೆ ಪ್ರೇಕ್ಷಕರ ಎದೆಯಲ್ಲಿ ನಡುಕ!

ಕೊಲೆ ರೇಪ್ ದರೋಡೆ ಮತ್ತಿತರರ ಪ್ರಕರಣದ ಕಥೆಯ ದಂಡುಪಾಳ್ಯ ಸಿನಿಮಾ ಬಹಳ ಸದ್ದು ಮಾಡಿತ್ತು. ಪ್ರೇಕ್ಷಕರ ಎದೆ ಝಲ್ ಎನಿಸುವಂತಹ ಸೀನ್ ಗಳು ಈ ಸಿನಿಮಾದಲ್ಲಿತ್ತು. ಇದೀಗ ದಂಡುಪಾಳ್ಯ ಭಾಗ-2 ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದ್ದು, ದಂಡುಪಾಳ್ಯ-3 ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ.

ದಂಡುಪಾಳ್ಯದ ಗ್ಯಾಂಗ್ನ ಕತೆ ಬಹಳ ಇದ್ದ ಕಾರಣ ನಿರ್ದೇಶಕರು ಇದರ ಮೂರನೇ ಭಾಗವನ್ನು ಆರಂಭಿಸಿದ್ದಾರಂತೆ. ಭಾಗ-2 ಒಂದೆರೆಡು ತಿಂಗಳಲ್ಲಿ ರಿಲೀಸ್ ಆಗಲಿದೆಯಂತೆ. ಒಂದು ಸಿನಿಮಾದ ಮೂರು ಭಾಗಗಳಲ್ಲಿ ನಟಿಸುವುದು ಒಬ್ಬ ಕಲಾವಿದೆಗೆ ಹೆಮ್ಮೆಯ ವಿಷಯ. ನಿರ್ದೇಶಕ ಶ್ರೀನಿವಾಸರಾಜು ಭಾಗ-1ಕ್ಕಿಂತಲೂ ಅದ್ಭುತವಾಗಿ 2ರಲ್ಲಿ ನನ್ನ ಪಾತ್ರವನ್ನು ರೆಡಿ ಮಾಡಿದ್ದರು. ಇದೀಗ ಭಾಗ-3ರಲ್ಲಿಯೂ ಬಹಳ ವಿಶೇಷತೆಯಿಂದ ಕೂಡಿದೆ ಎಂದಿದ್ದಾರೆ ನಟಿ ಪೂಜಾ ಗಾಂಧಿ.

ಒಬ್ಬ ನಟಿ ಒಂದೇ ಪಾತ್ರವನ್ನು ಮೂರು ಭಾಗಗಳಲ್ಲಿ ನಟಿಸುವುದೂ ಚಾಲೆಂಜ್. ಅದನ್ನು ಈಗಾಗಲೇ ಎರಡೂ ಭಾಗಗಳಲ್ಲಿ ಪೂರ್ಣಗೊಳಿಸಿದ್ದೇನೆ. ಭಾಗ ಮೂರರಲ್ಲಿಯೂ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ನಟಿಸುತ್ತೇನೆ ಎಂಬ ವಿಶ್ವಾಸ ಪೂಜಾ ಅವರದ್ದು, ದಂಡುಪಾಳ್ಯ-3ರ ಚಿತ್ರೀಕರಣ ಮೂರು ದಿನಗಳಿಂದ ನಡೆಯುತ್ತಿದೆ.

Courtesy: Kannada News Now

Facebook Auto Publish Powered By : XYZScripts.com