ಶೀಘ್ರವೇ ಬರಲಿದೆ ‘ಆಪ್ತಮಿತ್ರ 2 ‘.. ನಾಯಕ ಯಾರು ಗೊತ್ತಾ?

ಕನ್ನಡದ ಸೂಪರ್ ಹಿಟ್ ಸಿನಿಮಾಗಳ ಪೈಕಿ ‘ಆಪ್ತಮಿತ್ರ’ ಕೂಡ ಒಂದು. ‘ಆಪ್ತಮಿತ್ರ’ ಸಿನಿಮಾ ಒಂದು ವರ್ಷಕ್ಕೂ ಹೆಚ್ಚು ಕಾಲ ಚಿತ್ರಮಂದಿರದಲ್ಲಿ ಇದ್ದು ದೊಡ್ಡ ಗಳಿಕೆ ಮಾಡಿದ ಸಿನಿಮಾ. ಡಾ.ವಿಷ್ಣುವರ್ಧನ್ ಸಿನಿ ಕೆರಿಯರ್ ನಲ್ಲಿ ಬಂದ ಒಂದು ಮೈಲಿಗಲ್ಲು ಸಿನಿಮಾ.

ಅಂದಹಾಗೆ, ಈಗ ಯಾಕೆ ಮತ್ತೆ ‘ಆಪ್ತಮಿತ್ರ’ ಸಿನಿಮಾ ಬಗ್ಗೆ ಹೇಳುತ್ತಿದ್ದೀವಿ ಎಂಬ ಕುತೂಹಲ ನಿಮಗೆ ಬರಬಹುದು. ಯಾಕಾಂದ್ರೆ ಈಗ 13 ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ ‘ಆಪ್ತಮಿತ್ರ’ ರೀತಿಯೇ ‘ಆಪ್ತಮಿತ್ರ 2’ ಸಿನಿಮಾ ಬರಲಿದೆಯಂತೆ. ‘ಆಪ್ತಮಿತ್ರ’ ನಂತರ ‘ಆಪ್ತರಕ್ಷಕ’ ಸಿನಿಮಾ ಬಂದ್ದಿತ್ತು. ಆದರೆ ಈ ಚಿತ್ರದ ನಂತರ ಇದೀಗ ‘ಆಪ್ತಮಿತ್ರ 2’ ಎಂಬ ಹೆಸರಿನಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ.

ಅಷ್ಟೆ ಅಲ್ಲದೆ ನಟ, ಕ್ರೇಜಿ ಸ್ಟಾರ್ ರವಿಚಂದ್ರನ್ ಈ ಸಿನಿಮಾಗೆ ನಾಯಕ ಎನ್ನುವ ಸುದ್ದಿ ಕೂಡ ಇದೀಗ ಹರಿದಾಡಿದೆ. ‘ಆಪ್ತಮಿತ್ರ’ ಚಿತ್ರವನ್ನು ನಿರ್ದೇಶಕ ಮಾಡಿದ್ದ ಪಿ.ವಾಸು ಅವರೇ ಈಗ ‘ಆಪ್ತಮಿತ್ರ 2’ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರಂತೆ. ‘ಶಿವಲಿಂಗ’ ನಂತರ ‘ಆಪ್ತಮಿತ್ರ 2’ ಸಿನಿಮಾವನ್ನು ವಾಸು ಕೈಗೆತ್ತಿಕೊಂಡಿದ್ದಾರೆ.

Facebook Auto Publish Powered By : XYZScripts.com