ಶಿವರಾಜ್ ಕುಮಾರ್ ಅವರ ಚಿತ್ರಕ್ಕೆ ನಾಯಕಿಯಾಗಿ ಬರಲಿದ್ದಾಳೆ ತೆಲುಗಿನ ಈ ಬೆಡಗಿ, ಯಾರು?.. ಇಲ್ಲಿ ಓದಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರಗಳಿಗೆ ಹೊಸ ಹೊಸ ನಾಯಕಿಯರು ಬರುವುದು ಇತ್ತೀಚಿನ ಟ್ರೆಂಡ್ ಆಗಿದೆ. ಅದರಂತೆ ಇದೀಗ ಮತ್ತೊಬ್ಬ ತೆಲುಗು ನಟಿ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗಿದೆ.

ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕಾಗಿ ಟಾಲಿವುಡ್ ನ ಸಕ್ಸಸ್ ಫುಲ್ ನಾಯಕಿ ಈಶಾ ರೆಬ್ಬಾ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ಅಭಿಮಾನಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದ್ದು, ಟೈಟಲ್ ನಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಸದ್ಯ, ಜೂನಿಯರ್ ಎನ್.ಟಿ.ಆರ್ ಅಭಿನಯಿಸುತ್ತಿರುವ ‘ಅರವಿಂದ ಸಮೇತ’ ಚಿತ್ರದಲ್ಲಿ ನಟಿಸುತ್ತಿರುವ ಈ ನಟಿ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ ಒಪ್ಪಿಕೊಂಡಿದ್ದಾರಂತೆ.

ರಾಜ್ ಕುಟುಂಬದ ಸದಸದ್ಯರಾಗಿರುವ ಲಕ್ಕಿ ಗೋಪಾಲ್ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾ ‘ಎಸ್.ಆರ್.ಕೆ’ ಚಿತ್ರಕ್ಕಾಗಿ ಈಶಾ ರೆಬ್ಬಾ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅಂತಿಮ ಹಂತದ ಮಾತುಕತೆ ಮುಗಿದಿದ್ದು, ಅಧಿಕೃತವಾಗಿ ಘೋಷಣೆಯೊಂದೆ ಬಾಕಿ ಎನ್ನಲಾಗಿದೆ.

Facebook Auto Publish Powered By : XYZScripts.com