ಶಿವಮೊಗ್ಗದಲ್ಲಿ ‘ಚಕ್ರವರ್ತಿ’ ಆಗಮನಕ್ಕೆ ತಳಿರು ತೋರಣ ಕಟ್ಟಿದ್ರು!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಚಕ್ರವರ್ತಿ’ ಚಿತ್ರ ರಾತ್ರಿ 2 ಗಂಟೆಯಿಂದಲೇ ಪ್ರದರ್ಶನ ಶುರುವಾಗಿದ್ದು.

ಗರದ ವೀರಭದ್ರೇಶ್ವರ ಚಿತ್ರಮಂದಿರ ತಳಿರು ತೋರಣಗಳಿಂದ ಅಲಂಕೃತಗೊಂಡಿದೆ. ಅಭಿಮಾನಿಗಳು ನಿನ್ನೆ ರಾತ್ರಿಯೇ ಥಿಯೇಟರ್ ಮುಂದೆ ಜಮಾಯಿಸಿ ತಮ್ಮ ನೆಚ್ಚಿನ ನಟನ ಪರ ಘೋಷಣೆ ಕೂಗಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ.

12 ಗಂಟೆಯ ನಂತರ ಸಿನಿಮಾ ಟಿಕೆಟ್ ವಿತರಣೆಯಾಗಿದೆ ಎನ್ನಲಾಗಿದೆ. ಆದರೆ ಈಗಾಗಲೇ ಟಿಕೆಟ್ ಆನ್ಲೈನ್ನಲ್ಲಿ ಮಾರಾಟವಾಗಿದ್ದವು. ಸ್ವಲ್ಪ ಟಿಕೆಟ್ ಅಭಿಮಾನಿಗಳಿಗೆ ಮೀಸಲಿಡಲಾಗಿತ್ತು ಎನ್ನಲಾಗಿದೆ. ಎರಡು ಗಂಟೆ ಸುಮಾರಿಗೆ ಸಿನಿಮಾ ಪ್ರದರ್ಶನ ಇದ್ದುದ್ದರಿಂದ ನಿಂತುಕೊಂಡಾದರೂ ಸಿನಿಮಾ ನೋಡಲೇಬೇಕು ಎಂದು ಅಭಿಮಾನಿಗಳು ಜಾಗರಣೆ ಮಾಡಿದ್ದರು.

Courtesy: News Now Kannada

Facebook Auto Publish Powered By : XYZScripts.com