ಶಿವಣ್ಣ-ಸುದೀಪ್ ನಡುವೆ ಚಕ್ರವರ್ತಿ ಕಮಾಲ್ : ಕನ್ನಡಲೊಂದು ಹೊಸ ಪರ್ವ

ಸಿನಿಲೋಕದ ಚಕ್ರವರ್ತಿ ಇತ್ತೀಚಿನ ದಿನಗಳಲ್ಲಿ ತೆರೆ ಹಿಂದೆ ಸರಿದಿದ್ದಾರೆ. ಆದರೆ ಕನ್ನಡ ಚಿತ್ರರಂಗಕ್ಕೆ ಅವರು ಹತ್ತಿರ ಬರುತ್ತಿದ್ದಾರೆ ಎಂದರೆ ಜನ ನಂಬಲೆ ಬೇಕು. ಯಾಕೆಂದರೆ ಶಿವರಾಜ್ ಕುಮಾರ್, ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರದಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿಯವರ ಆಗಮನವಾಗಿದೆ.

ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್, ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಕನ್ನಡ ಚಿತ್ರರಂಗದಲ್ಲಿನ ಹಿರೋಗಳು. ಇವರಿಬ್ಬರ ಕಾಂಬಿನೇಷನ್ ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಭಾರಿ ಸುದ್ದಿಯಾಗುತ್ತಿದೆ. ದೈತ್ಯ ಪ್ರತಿಬೆಗಳ ಈ ಚಿತ್ರ ಅಭಿಮಾನಿಗಳ ಲೋಕದಲ್ಲಿ ಮೇನಿಯ ಸೃಷ್ಟಿಸಿದೆ.

ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ ಕೂಡ ನಟಿಸಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಅವರು ಶೂಟಿಂಗ್ ಸ್ಟಾಟ್ ಗೆ ಆಗಮಿಸಲಿದ್ದಾರಂತೆ.

ಸುಮಾರು 350 ಚಿತ್ರಗಳಲ್ಲಿ ನಟಿಸಿರುವ ಮಿಥುನ್ ಚಕ್ರವರ್ತಿ, ಅವರ ಪಾಲ್ಗೊಳ್ಳುವಿಕೆ ಶಿವಣ್ಣ ಹಾಗೂ ಕಿಚ್ಚನಿಗೆ ಸಂತಸ ತಂದಿದೆಯಂತೆ.

ಈ ಚಿತ್ರ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಇದೀಗ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ತ್ರಿಬಲ್ ಸೆಂಚೂರಿ ಸ್ಟಾರ್ ಮಿಥುನ್ ಚಕ್ರವರ್ತಿಯ ಪಾಲ್ಗೊಳ್ಳುವಿಕೆ ಕಿಚ್ಚ ಸುದೀಪ್ ನ ಅಭಿನಯ ಶೈಲಿಯ ಚಾಕಚಕ್ಯತೆಯ ಸಮ್ಮಿಳನ ಮತ್ತಷ್ಟು ಸುದ್ದಿಗೆ ಎಡೆಮಾಡಿಕೊಡಲಿದೆ.

Courtesy: Balkani News

Facebook Auto Publish Powered By : XYZScripts.com