ಶಿವಣ್ಣ ಲಾಂಗ್ ಹಿಡಿಯುವ ಸ್ಟೈಲ್ ಕೊಂಡಾಡಿದ ಚಾಲೆಂಜಿಂಗ್ ಸ್ಟಾರ್

ಇಂಡಸ್ಟ್ರಿಯಲ್ಲಿ ಕೆಲವೇ ಕೆಲವರು ಮಾತ್ರ ರೌಡಿಸಂ ಸಿನಿಮಾಗಳಲ್ಲಿ ಹೆಚ್ಚು ಅಭಿನಯಿಸ್ತಾರೆ. ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖರು.

ದರ್ಶನ್ ಅವರು ಲಾಂಗ್ ಹಿಡಿದ್ರೆ ಆ ಸಿನಿಮಾ ಸೂಪರ್ ಹಿಟ್ ಎಂಬ ಮಾತು ಗಾಂಧಿನಗರದಲ್ಲಿದೆ. ಅದಕ್ಕೆ ಉದಾಹರಣೆ ಎಂಬಂತೆ ದರ್ಶನ್ ಅವರು ಲಾಂಗ್ ಹಿಡಿದಿರುವ ಬಹುತೇಕ ಚಿತ್ರಗಳು ಬ್ಲ್ಯಾಕ್ ಬಸ್ಟರ್ ಆಗಿವೆ.[ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ ‘ಚಕ್ರವರ್ತಿ’]

ಇತ್ತೀಚೆಗೆ ಫೇಸ್ ಬುಕ್ ಲೈವ್ ಗೆ ಬಂದಿದ್ದ ಚಾಲೆಂಜಿಂಗ್ ಸ್ಟಾರ್, ಲಾಂಗ್ ಸಂಪ್ರದಾಯದ ಬಗ್ಗೆ ಮಾತನಾಡಿದ್ದರು. ಈ ವೇಳೆ ಡಾ.ಶಿವರಾಜ್ ಕುಮಾರ್ ಅವರು ಲಾಂಗ್ ಹಿಡಿಯುವ ಸ್ಟೈಲ್ ನ್ನ ಹಾಡಿ ಹೊಗಳಿದ್ದಾರೆ. ಅಷ್ಟಕ್ಕೂ, ಶಿವಣ್ಣನ ಬಗ್ಗೆ ದರ್ಶನ್ ಏನ್ ಹೇಳಿದ್ರು…..ಮುಂದೆ ಓದಿ…

”ದರ್ಶನ್ ಗೆ ಲಾಂಗ್ ತುಂಬಾ ಚೆನ್ನಾಗಿ ಹೋಲುತ್ತೆ ಎಂಬ ಅಭಿಮಾನಿಗಳ ಅಭಿಪ್ರಾಯಕ್ಕೆ ಮಾತನಾಡಿದ ದರ್ಶನ್, ಡಾ.ಶಿವರಾಜ್ ಕುಮಾರ್ ಅಭಿನಯಿಸಿದ್ದ ‘ಓಂ’ ಚಿತ್ರವನ್ನ ನೆನಪಿಸಿಕೊಂಡರು. ‘ರೌಡಿಸಂ’ ಸಿನಿಮಾ ಅಂದ್ರೆ ‘ಓಂ’ ಅತ್ಯುತ್ತಮ ಚಿತ್ರವೆಂದರು.

ಲಾಂಗ್ ಹಿಡಿಯುವ ವಿಷ್ಯಕ್ಕೆ ಬಂದ್ರೆ ಶಿವರಾಜ್ ಕುಮಾರ್ ಅವರ ಮೊದಲು ಎಂದ ದರ್ಶನ್, ”ಓಂ ಚಿತ್ರದಲ್ಲಿ ಶಿವಣ್ಣ ಲಾಂಗ್ ಹಿಡಿದ ಸ್ಟೈಲ್, ಆಮೇಲೆ ಬೇರೆ ಯಾರಿಗೂ ಆಗಿಲ್ಲ” ಎಂದು ಹ್ಯಾಟ್ರಿಕ್ ಹೀರೋ ಸ್ಟೈಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

”ನಮಗೆ ರೌಡಿಸಂ ಕಥೆಗಳು ಬಂದಾಗ, ಏನೋ ಒಂದು ಆಗಲಿ ನೋಡೋಣ ಅಂತ ಟ್ರೈ ಮಾಡಿದ್ದು ಅಷ್ಟೇ. ಅದೇನೋ ಸ್ವಲ್ಪ ಗ್ರಿಪ್ ಸಿಕ್ತು ಹಿಡ್ಕೊಂಡ್ಬಿಟ್ಟೆ ಎಂದರು. ಇನ್ನು ”ನಾವು ಲಾಂಗ್ ಇದ್ದಿವಿ ಅಲ್ವಾ. ಅದಕ್ಕೆ ನಮಗೆ ಲಾಂಗ್ ಮ್ಯಾಚ್ ಆಯ್ತು” ಎಂದ ದರ್ಶನ್ ತಮ್ಮ ಸ್ಟೈಲ್ ಬಗ್ಗೆ ಮಾತನಾಡಿದರು.

ದರ್ಶನ್ ಅಭಿನಯದ ಚೊಚ್ಚಲ ಚಿತ್ರ ‘ಮೆಜೆಸ್ಟಿಕ್’ನಲ್ಲೇ ಲಾಂಗ್ ಹಿಡಿದ ದರ್ಶನ್, ನಂತರ ‘ದಾಸ’, ‘ಕಿಟ್ಟಿ’, ‘ಕರಿಯ’, ‘ಶಾಸ್ತ್ರಿ’, ‘ಕಲಾಸಿಪಾಳ್ಯ’, ‘ಇಂದ್ರ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಲಾಂಗ್ ಹಿಡಿದು ಮಿಂಚಿದ್ದಾರೆ.

 Courtesy: Filmi beat
Facebook Auto Publish Powered By : XYZScripts.com