ಶಿವಣ್ಣ ಮತ್ತು ರಚಿತಾ ರಾಮ್ ಜೋಡಿ ತೆರೆ ಮೇಲೆ ತರಲಿದ್ದಾರೆ ನಿರ್ಮಾಪಕ ದ್ವಾರಕೀಶ್, ಸಂಪೂರ್ಣ ಮಾಹಿತಿ ಇಲ್ ಓದಿ

ಉದ್ಯಮದಲ್ಲಿ ಎಲ್ಲಾ ಟಾಪ್ ಸ್ಟಾರ್​​ಗಳ ಜತೆ ಕೆಲಸ ಮಾಡಿರುವ ರಚಿತಾರಾಮ್‌ ಇದೀಗ ಲೆಜೆಂಡ್‌ ಶಿವಣ್ಣನೊಟ್ಟಿಗೆ ತೆರೆ ಹಂಚಿಕೊಳ್ಳೋದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ರುಸ್ತುಂ ಸಿನಿಮಾದಲ್ಲಿ ಗೆಸ್ಟ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು.

ಡಿಂಪಲ್ ಕ್ವೀನ್ ನಟಿ ರಚಿತಾರಾಮ್ ಮತ್ತೊಂದು ದೊಡ್ಡ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ದ್ವಾರಕೀಶ್‌ ಬ್ಯಾನರ್‌ನಲ್ಲಿ ಯೋಗಿ ದ್ವಾರಕೀಶ್‌ ನಿರ್ಮಾಣದಲ್ಲಿ ಸಟ್ಟೇರುತ್ತಿರುವ ದ್ವಾರಕೀಶ್‌ ಬ್ಯಾನರ್‌ನ 52ನೇ ಚಿತ್ರಕ್ಕೆ ರಚಿತಾರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಡಾ. ಶಿವರಾಜ್‌ಕುಮಾರ್‌ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಿನಿಮಾ ಮೂಲಕ ರಚಿತಾರಾಮ್ ಶಿವಣ್ಣನ ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾ ಈ ವರ್ಷಾಂತ್ಯಕ್ಕೆ ಇಲ್ಲ ಹೊಸ ವರ್ಷಕ್ಕೆ ಸೆಟ್ಟೇರುವ ಸಾಧ್ಯತೆ ಇದೆ. ಆಪ್ತಮಿತ್ರ, ಆಪ್ತರಕ್ಷಕ, ಶಿವಲಿಂಗ ಚಿತ್ರಗಳನ್ನು ನಿರ್ದೇಶಿಸಿದ್ದ ಪಿ.ವಾಸು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

Facebook Auto Publish Powered By : XYZScripts.com