ಶಿವಣ್ಣ ನ ‘ಟಗರು’ ಚಿತ್ರವನ್ನು ಪರ ಭಾಷೆಗೆ ರಿಮೇಕ್ ಮಾಡಲು ಮುಗಿಬಿದ್ದ ನಿರ್ದೇಶಕರು… ಇಲ್ಲಿ ಓದಿ

ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅಭಿನಯದ ‘ಟಗರು’ ಚಿತ್ರ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಟಗರಿನ ಪೊಗರಿಗೆ ಎಲ್ಲೆಡೆ ಭಾರಿ ರೆಸ್ಪಾನ್ಸ್ ಸಿಗುತ್ತಿದೆ. ಹೌದು, ಸೂರಿ ನಿರ್ದೇಶನದ ‘ಟಗರು’ ಚಿತ್ರ ಸಕ್ಸಸ್‌ ಆಗಿದೆ. ಶಿವಣ್ಣನ ಟಗರಿನ ಲುಕ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ವಿಭಿನ್ನ ಕಥೆ ಹಾಗೂ ಸ್ಕ್ರೀನ್‌ ಪ್ಲೇಯಿಂದಾಗಿ ಸೂರಿ ನಿರ್ದೇಶನಕ್ಕೆ ಗಾಂಧಿನಗರದ ಜನತೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇಡೀ ರಾಜ್ಯದ್ಯಂತ ಟಗರು ಮಿಂಚಿನ ಓಟ ಮುಂದುವರೆದಿದೆ. 

ಇದೀಗ ಟಗರಿನ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಬೇರೆ ಭಾಷೆಯ ವೀಕ್ಷಕರು ಕೂಡ ಟಗರು ಕಣ್ತುಂಬಿಕೊಳ್ಳಲು ಕ್ಯೂ ಹಚ್ಚಿದ್ದಾರೆ. ಟಗರು ಚಿತ್ರಕ್ಕೆ ಕೇಳಿ ಬರುತ್ತಿರುವ ಅಪಾರ ಬೇಡಿಕೆ ಚಿತ್ರತಂಡದ ಖುಷಿ ಹೆಚ್ಚಿಸಿದೆ. ಇದರ ಜತೆಗೆ ಪರಭಾಷೆಯ ವೀಕ್ಷಕರ ಅನುಕೂಲಕ್ಕಾಗಿ ಟಗರು ಚಿತ್ರಕ್ಕೆ ಇಂಗ್ಲಿಷ್ ಸಬ್‌ ಟೈಟಲ್ ಅಳವಡಿಸಲಾಗಿದೆ. ನಾಳೆಯಿಂದ ಎಲ್ಲ ಚಿತ್ರಮಂದಿರಗಳಲ್ಲಿಯೂ ಇಂಗ್ಲಿಷ್ ಸಬ್ ಟೈಟಲ್‌ ನೊಂದಿಗೆ ( ಕನ್ನಡದ ಸಂಭಾಷಣೆ ಇಂಗ್ಲಿಷ್‌ಗೆ ಭಾಷಾಂತರ ಮಾಡಲಾಗಿರುತ್ತದೆ.) ಟಗರು ಚಿತ್ರ ಪ್ರದರ್ಶನಗೊಳ್ಳಲಿದೆ.

Facebook Auto Publish Powered By : XYZScripts.com