ಶಿವಣ್ಣನ ಹಾಡಿ ಹೊಗಳಿದ ಅಂತರಾಷ್ಟ್ರೀಯ ಕ್ರಿಕೆಟಿಗ ಆಡಂ ಗಿಲ್ ಕ್ರಿಸ್ಟ್

ನಟ ಡಾ.ಶಿವರಾಜ್ ಕುಮಾರ್ ರನ್ನು ಅಂತರಾಷ್ಟೀಯ ಕ್ರಿಕೆಟಿಗ ಆಡಂ ಗಿಲ್ ಕ್ರಿಸ್ಟ್ ಹೊಗಳಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆಸಿಸಿ ಸೀಸನ್ 2 ನಲ್ಲಿ ಆಡಂ ಗಿಲ್ ಕ್ರಿಸ್ಟ್ ಶಿವಣ್ಣ ತಂಡದಲ್ಲಿ ಆಡುತ್ತಿದ್ದಾರೆ. ಶಿವಣ್ಣನನ್ನು ಹತ್ತಿರದಿಂದ ನೋಡಿದ ಗಿಲ್ ಕ್ರಿಸ್ಟ್‌ಅವರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಫೋಟೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ಶಿವರಾಜ್ ಕುಮಾರ್ ಒಬ್ಬ ಒಳ್ಳೆ ಕ್ರಿಕೆಟಿಗ ಹಾಗೂ ಒಳ್ಳೆ ನೃತ್ಯಗಾರ ಎಂದಿದ್ದಾರೆ. ಒಬ್ಬ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಶಿವಣ್ಣ ನೃತ್ಯದ ಬಗ್ಗೆ ,ನಾಯಕತ್ವದ ಬಗ್ಗೆ ಅವರ ಎನರ್ಜಿ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

‘ಕನ್ನಡ ಕ್ರಿಕೆಟ್ ಕಪ್’ ಸರಣಿಯ 4ಪಂದ್ಯಗಳು ನಿನ್ನೆ ನಡೆದಿದೆ. ಇವುಗಳಲ್ಲಿ ಗಣೇಶ್ ಸಾರಥ್ಯದ ಒಡೆಯರ್ ಚಾರ್ಜರ್ಸ್ ತಂಡ ಎರಡಕ್ಕೆ ಎರಡೂ ಪಂದ್ಯಗಳನ್ನು ಗೆದ್ದು ಪೈನಲ್ ತಲುಪಿದ್ದು, ಫೈನಲ್ ತಲುಪಿದ ಮೊದಲ ತಂಡವಾಗಿದೆ. ಸರಣಿಯ ಮೂರನೇ ಪಂದ್ಯದಲ್ಲಿ ಗಣೇಶ್ ಹಾಗೂ ಉಪೇಂದ್ರರ ಹೊಯ್ಸಳ ಈಗಲ್ಸ್ ಸಮರ ಶುರು ಮಾಡಿದರು. ಈ ಪೈಕಿ ಮತ್ತೆ ಗಣೇಶ್ ಟೀಂ ಗೆದ್ದಿತು. ಎರಡೂ ಪಂದ್ಯಗಳಲ್ಲಿ ಗೆದ್ದ ಒಡೆಯರ್ ಚಾರ್ಜರ್ ನೇರವಾಗಿ ಪೈನಲ್ ತಲುಪಿತು. ನಿನ್ನೆ ನೆಡೆದ 4ಪಂದ್ಯಗಳ ಪೈಕಿ ಶಿವಣ್ಣ ತಂಡ ಒಂದು, ಯಶ್ ತಂಡ ಒಂದು ಹಾಗೂ ಗಣೇಶ್ ತಂಡ ಎರಡು ಪಂದ್ಯಗಳನ್ನು ಗೆದ್ದಿದೆ. ಫೈನಲ್ ಪಂದ್ಯ ಭಾನುವಾರ ರಾತ್ರಿ 8:15 ಕ್ಕೆ ನಡೆಯಲಿದೆ.

Facebook Auto Publish Powered By : XYZScripts.com