ಶಿವಣ್ಣನ ‘ಟಗರು’ V/S ಭಂಡಾರಿ ಸಹೋದರರ ‘ರಾಜರಥ’

ಸಿನಿಮಾ ಡೆಸ್ಕ್ : ಬಹುನಿರೀಕ್ಷಿತ ‘ರಾಜರಥ’ ಸಿನಿಮಾ ಜನವರಿ 23 ರಂದು ಥಿಯೇಟರ್ ಗೆ ಅಪ್ಪಳಿಸಲಿದೆ. ರಂಗಿತರಂಗ ಚಿತ್ರದ ಬಳಿಕ ಭಂಡಾರಿ ಸಹೋದರರು ರಾಜರಥ ಸಿನಮಾ ಮಾಡುತ್ತಿದ್ದು, ಸಿನಿಮಾದ ಬಗ್ಗೆ ಬಹಳ ಕ್ಯುರಿಯಾಸಿಟಿ ಹುಟ್ಟಿದೆ.

ಸಿನಿಮಾದಲ್ಲಿ ರವಿಶಂಕರ್, ನಿರೂಪ್ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇನ್ನು ತಮಿಳು ನಟ ಆರ್ಯ ಈ ಚಿತ್ರದಲ್ಲಿ ನಟಿಸಿದ್ದು, ಕನ್ನಡ-ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ಇನ್ನೂ ಈ ಸಿನಿಮಾಗೆ ಪೈಪೋಟಿ ನೀಡಲು ಶಿವರಾಜ್ ಕುಮಾರ್ ನಟನೆಯ ‘ಟಗರು’ ಸಿನಿಮಾ ಕೂಡ ಬರ್ತಿದೆ. ಹೌದು, ರಾಜರಥ’ ಸಿನಿಮಾ ರಿಲೀಸ್ ದಿನವೇ ಟಗರು ಸಿನಿಮಾ ತೆರೆಗೆ ಬರ್ತಿದೆ. ದುನಿಯಾ ಸೂರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಟಗರು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಹರಿಪ್ರಿಯಾ, ಮಾನ್ವಿತಾ ಹರೀಶ್ ತೆರೆ ಹಂಚಿಕೊಂಡಿದ್ದಾರೆ.

Facebook Auto Publish Powered By : XYZScripts.com