ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಲ್ಲಿಕಾ ಶೆರಾವತ್…!

ಬಾಲಿವುಡ್ ಐಟಂ ಬಾಂಬ್ ಎಂದೆ ಒಂದು ಕಾಲದಲ್ಲಿ ಗುರುತಿಸಲ್ಪಟ್ಟಿದ್ದ ಮಲಿಕಾ ಶೆರಾವತ್ ಗೌಪ್ಯವಾಗಿ ಮದುವೆಯಾಗಿದ್ದಾರಂತೆ. ಆಕೆ ತನ್ನ ಪ್ರೆಂಚ್ ಮೂಲದ ಗೆಳೆಯ ಸಿರಿಲ್ಲೆ ಆಕ್ಸಿನ್ ಪ್ಯಾನ್ಸ್ ನನ್ನು ಖಾಸಗಿ ಸಮಾರಂಭವೊಂದರಲ್ಲಿ ವಿವಾಹವಾಗಿದ್ದಾರಂತೆ ಹೀಗೆ ಮಲ್ಲಿಕಾ ಶೆರವಾತ್ ಮದುವೆ ಕುರಿತಂತೆ ಹಲವಾರು ಅಂತೆಕಂತೆಗಳು ಮಾದ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ಎಲ್ಲಾ ಅಂತೆಕಂತೆಗಳಿಗೆ ಇದೀಗ ನಟಿ ಅಂತ್ಯ ಹಾಡಿದ್ದಾರೆ. ಅಷ್ಟೇ ಅಲ್ಲದೆ ತನ್ನ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಮದುವೆಯಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಮಲ್ಲಿಕಾ, ನನ್ನ ಮದುವೆಯಾಗಿದೆ ಎಂಬುದು ಗಾಳಿ ಸುದ್ದಿಯಷ್ಟೇ. ಅಷ್ಟೇ ಅಲ್ಲದೆ ನಾನು ಬಾಲಿವುಡ್ ನಲ್ಲಿ ಸಿನಿಮಾಗಳನ್ನು ಮಾಡುವುದಿಲ್ಲ ಭಾರತಕ್ಕೆ ಬರೋದಿಲ್ಲ ಎಂದು ಹೇಳಿಯೂ ಇಲ್ಲ. ನನ್ನ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿದ್ದಾರೆ.
ಮಲ್ಲಿಕಾ ಶೆರವಾತ್ ಗೆಳೆಯ ಎನ್ನಲಾಗುತ್ತಿರುವ ಸಿರಿಲ್ಲೆ ಪ್ಯಾರಿಸ್ ನಲ್ಲಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದು, ಮಲ್ಲಿಕಾ ಹಾಗೂ ಸಿರಿಲ್ಲೆ ಡೆಟಿಂಗ್ ಆರಂಭಿಸಿದ್ದು ಮಾದ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ನಾವಿಬ್ಬರು ಕಾಮನ್ ಪ್ರೆಂಡ್ ಎಂದೇ ಹೇಳಿಕೊಂಡಿದ್ದ ಮಲ್ಲಿಕಾ, ವ್ಯಾಲೆಂಟೈನ್ಸ್ ಡೇ ಗೆ ಸಿರಿಲ್ಲೆ ನೀಡಿದ್ದ ದುಬಾರಿ ಕಾರನ್ನು ಗಿಫ್ಟ್ ಆಗಿ ಪಡೆದಿದ್ದರು. ಹೀಗಾಗಿಯೇ ಮಲ್ಲಿಕಾ ಶೆರಾವತ್ ಹಾಗೂ ಸಿರಿಲ್ಲೆ ನಡುವಿನ ಸಂಬಂಧದ ಸುತ್ತ ಅಂತೆಕಂತೆಗಳು ಹರಿದಾಡುತ್ತಿದ್ದವು.
ಈ ನಡುವೆ ಕೆಲವು ದಿನಗಳ ಹಿಂದೆ ಸ್ವತಃ ಮಲ್ಲಿಕಾ ಶೆರವಾತ್ ಸುದ್ದಿ ಮಾಡಿ, ನನ್ನ ಪ್ಯಾರೀಸ್ ನಲ್ಲಿರುವ ಮನೆಗೆ ನುಗ್ಗಿದ ಮುಸುಕು ದಾರಿಗಳು ನನ್ನ ಮೇಲೆ ದಾಳಿ ಮಾಡಿದ್ದರು ಎಂದು ಅಲವತ್ತುಕೊಂಡಿದ್ದರು.
Courtesy: Balkani News

Facebook Auto Publish Powered By : XYZScripts.com