ವೆನಿಲಾ ಚಿತ್ರದ ಕತೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿ ಓದಿ

ಬ್ಯೂಟಿಫುಲ್ ಮನಸುಗಳು ಚಿತ್ರದ ಮೂಲಕ ಸ್ಯಾಂಡಲ್ವುಡ್ ಗಮನ ಸೆಳೆದ ನಿರ್ದೇಶಕ ಜಯತೀರ್ಥ ಈ ಬಾರಿ ನೈಜ ಘಟನೆಯನ್ನು ಆಧರಿಸಿ ವೆನ್ನಿಲ್ಲಾ ಎಂಬ ಚಿತ್ರ ಮಾಡಿದ್ದಾರೆ.

ಉಡುಪಿ ಸಮೀಪ ಮುಲ್ಕಿ ಎಂಬ ಗ್ರಾಮದಿಂದ ತೆರೆದುಕೊಳ್ಳುವ ಕತೆಯಲ್ಲಿ ಕಾರ್ಪೋರೇಟ್ ಕಂಪೆನಿಗಳು ವಿಜ್ಞಾನಿಗಳನ್ನು ಹೇಗೆ ಬಳಸಿಕೊಳ್ಳುತ್ತವೆ ಎಂಬ ಸ್ಟೋರಿಯಿದೆ. ವೆನಿಲ್ಲಾ ಅಂದರೆ ಚಾಕ್ಲೇಟ್ ಅಂದುಕೊಳ್ಳಬೇಡಿ, ನೈಜ ಘಟನೆಯನ್ನಾಧರಿ ತೆರೆಗೆ ತರುತ್ತಿರುವ ಚಿತ್ರದ ಹೆಸರು.

ಬೆಂಗಳೂರು, ಮೈಸೂರು ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಅತೀ ಶೀಘ್ರದಲ್ಲಿ ಚಿತ್ರ ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ. ಪುತ್ರ ಅವಿನಾಶ್ ಸಿನಿಮಾ ಆಸೆಗೆ ಬೆನ್ನೆಲುಬಾಗಿ ತಂದೆ ಸಿ. ಜಯರಾಮ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಅವಿನಾಶ್ ಗೆ ನಾಯಕಿಯಾಗಿ ಸ್ವಾತಿ ತೆರೆ ಹಂಚಿಕೊಂಡಿದ್ದಾರೆ. ಸಣ್ಣ ಪಾತ್ರವಾದರೂ ಪ್ರಮುಖ ಪಾತ್ರವೊಂದರಲ್ಲಿ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರೆಹಮಾನ್ ಇದ್ದಾರೆ. ಚಿತ್ರದಲ್ಲಿ ಇನ್ನುಳಿದಂತೆ ರವಿಶಂಕರ್ ಗೌಡ, ಗಿರಿ ಸೇರಿದಂತೆ ಮತ್ತಿತರರು ಕಾಣಿಸಿಕೊಂಡಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಮರ್ಡರ್ ಮಿಸ್ಟ್ರಿಯ ಕಥೆಯ ಜೊತೆಗೆ ಕಾರ್ಪರೇಟ್ ಜಗತ್ತು ಅಲ್ಲಿನ ಮಾಫಿಯಾ ಸುತ್ತಾ ಚಿತ್ರ ಸಾಗಲಿದೆ. ಆಫ್ರಿಕಾದ ಕಂಪನಿಯೊಂದರಲ್ಲಿ ನಡೆದ ನೈಜಘಟನೆಯನ್ನಾಧರಿಸಿ ಚಿತ್ರ ಮಾಡಲಾಗಿದೆ.

ವಿಜ್ಞಾನಿಗಳು ಯಾವುದೇ ಹೊಸ ಸಂಶೋಧನೆ ಮಾಡಿದರೆ ವಿಜ್ಞಾನಿಗಳನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ. ಅವರನ್ನು ಹೇಗೆಲ್ಲಾ ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವ ಸುತ್ತಾ ಚಿತ್ರ ಸಾಗಲಿದೆ ಎನ್ನುವ ವಿವರ ಚಿತ್ರತಂಡದ್ದು

Facebook Auto Publish Powered By : XYZScripts.com