ವಿಷ್ಣು-ಭಾರತಿ ಲವ್ : ಲವ್ ಸಕ್ಸಸ್ ಗೆ ವಿಷ್ಣು ಏನೆಲ್ಲಾ ಮಾಡಿದ್ರು ಗೊತ್ತಾ..?

ನಿನ್ನೆ ನಡೆದ ವೀಕೆಂಡ್ ವಿತ್ ರಮೇಶ್ ಕಾರ್ಯುಕ್ರಮದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಆಸೀನರಾಗಿದ್ದರು. ನಟಿ ಭಾರತಿ ಹಾಗೂ ವಿಷ್ಣು ವರ್ಧನ್ ಅವರು ಲವ್ ಮಾಡಿ ಮದ್ವೆ ಆದವರು. ಅವರ ನಡುವಿನ ಲವ್ ಹಾಗೂ ಮದುವೆಯ ಕುರಿತು ಒಂದಿಷ್ಟು ಇಂಟರೆಸ್ಟಿಂಗ್ ವಿಷ್ಯಗಳನ್ನು ವೀಕೆಂಡ್ ವಿತ್ ಟೆಂಟ್ ನಲ್ಲಿ ಭಾರತಿ ಅವರು ಶೇರ್ ಮಾಡಿಕೊಂಡರು.

ವಿಷ್ಣುವರ್ಧನ್ ಹಾಗೂ ನಟಿ ಭಾರತಿ ಅವರು ಮೊದಲು ಚಾಮುಂಡೇಶ್ವರ ಸ್ಟುಡಿಯೋದಲ್ಲಿ ಭೇಟಿಯಾಗುತ್ತಾರೆ. ಅಲ್ಲಿ ಸ್ನೇಹಿತರಾದ ಇವರಿಬ್ಬರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯನ ಮಾಡಲು ಶುರು ಮಾಡ್ತಾರೆ. ನಂತರ ವಿಷ್ಣು ಅವರಿಗೆ ಭಾರತಿ ಮೇಲೆ ಲವ್ ಆಗತ್ತೆ. ಆದ್ರೆ ಇದನ್ನು ಹೇಳಲು ವಿಷ್ಣು ಅವರು ಯತ್ನಿಸುತ್ತಿರುತ್ತಾರೆ. ಅಲ್ಲದೇ ಹಾಡಿನ ಮೂಲಕ ಕೂಡ ತಮ್ಮ ಲವ್ ಹೇಳಿಕೊಂಡಿದ್ದರಂತೆ.

ಆದರೆ ಭಾರತಿ ಅವರಿಗೆ ಕೂಡ ವಿಷ್ಣು ಅವರ ಲವ್ ಮಾಡ್ತಾ ಇರೋದು ಗೊತ್ತಿರುತ್ತೆ, ಬಟ್ ಅವರು ಮೌನಿಯಾಗಿಯೇ ಇರುತ್ತಾರೆ. ನಂತರ ವಿಷ್ಣು ಅವರು ಭಾರತಿ ಅವರ ಕುಟುಂಬದವರ ಜೊತೆ ಕ್ಲೋಸ್ ಆಗಿ, ನಂತರ ಭಾರತಿ ಅವರನ್ನು ಒಪ್ಪಿಸಿ ಮದುವೆಯಾಗುತ್ತಾರೆ. ವಿಷ್ಣು-ಭಾರತಿ ಅವರು ಸ್ನೇಹಿತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಮದ್ವೆ ಮಾಡಿಕೊಳ್ತಾರೆ.

Courtesy: Kannada News Now

Facebook Auto Publish Powered By : XYZScripts.com