ವಿವಾದಿತ ಪದ್ಮಾವತಿ ಚಿತ್ರದ ಶೀರ್ಷಿಕೆ ‘ಪದ್ಮಾವತ್’ ಅಧಿಕೃತವಾಗಿ ಮರುನಾಮಕರಣ!

ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ವಿವಾದಿತ ಪದ್ಮಾವತಿ ಚಿತ್ರಕ್ಕೆ ಪದ್ಮಾವತ್ ಎಂದು ಅಧಿಕೃತ ಮರುನಾಮಕರಣ ಮಾಡಲಾಗಿದೆ.

ಕೇಂದ್ರ ಸಿನಿಮಾ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಸೂಚನೆಯಂತೆ ಚಿತ್ರತಂಡ ಹಲವು ಬದಲಾವಣೆಗಳನ್ನು ಮಾಡಿದ್ದು ಪದ್ಮಾವತಿ ಬದಲಿಗೆ ಪದ್ಮಾವತ್ ಎಂದು ಮರುನಾಮಕರಣ ಮಾಡಲಾಗಿದೆ.

ವಿವಾದ ಶಮನಗೊಳಿಸುವ ಸಲುವಾಗಿ ಸೆನ್ಸಾರ್ ಬೋರ್ಡ್ ಚಿತ್ರ ತಂಡಕ್ಕೆ ಐದು ಮಾರ್ಪಾಡುಗಳನ್ನು ಮಾಡುವಂತೆ ಚಿತ್ರತಂಡಕ್ಕೆ ಸೂಚನೆ ನೀಡಿತ್ತು. ಅದರಲ್ಲಿ ಚಿತ್ರದ ಶೀರ್ಷಿಕೆ ಸಹ ಒಂದಾಗಿತ್ತು.

ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದ್ದು ಇದೇ ಮೊದಲೆನಲ್ಲ. ಇದಕ್ಕೂ ಮುನ್ನ 2015ರಲ್ಲಿ ಬಿಡುಗಡೆಯಾಗಿದ್ದ ಉಡ್ತಾ ಪಂಜಾಬ್ ಚಿತ್ರ ಸಹ ಶೀರ್ಷಿಕೆ ಬದಲಿಸುವಂತೆ ಸೂಚಿಸಿತ್ತು. ಆದರೆ ಚಿತ್ರತಂಡ ತ್ರಿಬ್ಯೂನೆಲ್ ಮೊರೆ ಹೋಗಿತ್ತು. ನಂತರ ಶೀರ್ಷಿಕೆ ಬದಲಾವಣೆಗೊಳ್ಳದೇ ಚಿತ್ರ ಬಿಡುಗಡೆಯಾಗಿತ್ತು.

ಪದ್ಮಾವತ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹೀದ್ ಕಪೂರ್ ಅಭಿನಯಿಸಿದ್ದಾರೆ. ಇನ್ನು ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ. ಪದ್ಮಾವತಿ ಚಿತ್ರದ ಬಿಡುಗಡೆಗೆ ಕರ್ಣಿ ಸೇನೆ ವಿರೋಧ ವ್ಯಕ್ತಪಡಿಸಿತ್ತು.

Facebook Auto Publish Powered By : XYZScripts.com