‘ವಿಲನ್’ ಚಿತ್ರಕ್ಕು ಮುಂಚೆ ಇನ್ನೊಂದು ಚಿತ್ರದಲ್ಲಿ ಸುದೀಪ್ ‘ವಿಲನ್’.!

ಸ್ಯಾಂಡಲ್ ವುಡ್ ನಲ್ಲಿ ನಾಯಕನಟನಾಗಿದ್ದ ಸುದೀಪ್, ತೆಲುಗಿನ ‘ಈಗ’ ಚಿತ್ರದಲ್ಲಿ ಮೊದಲ ಬಾರಿಗೆ ವಿಲನ್ ಆಗಿ ಮಿಂಚಿದ್ದರು. ಈ ಚಿತ್ರದ ನಂತರ ಸುದೀಪ್ ಹೆಸರು ಬೇರೆ ಚಿತ್ರರಂಗಗಳಲ್ಲಿಯೂ ಸದ್ದು ಮಾಡಿತು.

ಕಿಚ್ಚನನ್ನ ಬೇರೆ ಬೇರೆ ಪಾತ್ರಗಳಲ್ಲಿ ನೋಡುವ ಮನಸ್ಸು ಮಾಡಿದರು ನಿರ್ದೇಶಕರು. ‘ಈಗ’ ನಂತರ ತಮಿಳಿನ ‘ಪುಲಿ’ ಚಿತ್ರದಲ್ಲೂ ಸುದೀಪ್ ಖಳನಾಯಕನಾಗಿ ಅಬ್ಬರಿಸಿದ್ದರು. ಆದ್ರೆ, ಕನ್ನಡದಲ್ಲಿ ಕಿಚ್ಚನನ್ನ ವಿಲನ್ ಶೇಡ್ ನಲ್ಲಿ ನೋಡೋ ಭಾಗ್ಯ ಸಿಕ್ಕಿರಲಿಲ್ಲ. ‘ವಾಲಿ’ ಚಿತ್ರದಲ್ಲಿ ದ್ವಿಪಾತ್ರ ನಿರ್ವಹಿಸಿದ್ದ ಸುದೀಪ್ ನೆಗಿಟೀವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು.

ಇದೀಗ, ಜೋಗಿ ಪ್ರೇಮ್ ‘ದಿ ವಿಲನ್’ ಎಂಬ ಸಿನಿಮಾ ಶುರು ಮಾಡುವ ಮೂಲಕ, ಸುದೀಪ್ ಪಾತ್ರದ ಬಗ್ಗೆ ಕುತೂಹಲ ಹುಟ್ಟಿಸಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ಒಟ್ಟಿಗೆ ಅಭಿನಯಿಸುತ್ತಿದ್ದು, ನೆಗಿಟೀವ್ ಶೇಡ್ ಇರಬಹುದು ಎಂಬ ಲೆಕ್ಕಾಚಾರ ಅಭಿಮಾನಿಗಳಿಗೆ ಬಿಟ್ಟಿದ್ದರು. ಆದ್ರೀಗ, ವಿಲನ್ ಚಿತ್ರಕ್ಕು ಮುಂಚೆಯೇ ಇನ್ನೊಂದು ಚಿತ್ರದಲ್ಲಿ ಸುದೀಪ್ ವಿಲನ್ ಆಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ…..

ನೆಗಿಟೀವ್ ಶೇಡ್
‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಟ್ವಿಸ್ಟ್

ಗುರುನಂದನ್ ಅಭಿನಯದ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಗೊತ್ತಿರೋ ವಿಚಾರ. ಆದ್ರೆ, ಈ ಚಿತ್ರದಲ್ಲಿ ಸುದೀಪ್ ಯಾವ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ ಎಂಬುದು ಗೌಪ್ಯವಾಗಿತ್ತು. ಇದೀಗ, ರಾಜು ಚಿತ್ರದಲ್ಲಿ ಕಿಚ್ಚನ ಪಾತ್ರ ಬಹಿರಂಗವಾಗಿದ್ದು, ನೆಗಿಟೀವ್ ಶೇಡ್ ನಲ್ಲಿ ಸುದೀಪ್ ಮಿಂಚಿದ್ದಾರಂತೆ.

 

ವಿಲನ್ ಆದ್ರಾ ಕಿಚ್ಚ
ರಾಜು ಪಾಲಿಗೆ ‘ವಿಲನ್’ ಆದ ಸುದೀಪ್

ನೆಗಿಟೀವ್ ಶೇಡ್ ನಲ್ಲಿ ಅಭಿನಯಿಸಿರುವ ಸುದೀಪ್ ಚಿತ್ರದಲ್ಲಿ ವಿಲನ್ ಅಂತೆ. ತೆಲುಗಿನ ‘ಈಗ’ ಚಿತ್ರದಲ್ಲಿ ಮಾಡಿದಂತಹ ಪಾತ್ರ ಇದಾಗಿದ್ದು, ಇಲ್ಲಿಯೂ ಪ್ರೇಮಿಗಳನ್ನ ಕಾಡಲಿದ್ದಾರಂತೆ.

 

ದೊಡ್ಡ ಉದ್ಯಮಿ
ವಿಜಯ ಮಲ್ಯ ಛಾಯೆ

ಬೆಂಗಳೂರಿನ ಉದ್ಯಮಿ ವಿಜಯ ಮಲ್ಯ ಅವರನ್ನ ಹೋಲುವಂತಹ ಅಂಶಗಳು ಸುದೀಪ್ ಅವರ ಪಾತ್ರದಲ್ಲಿದೆಯಂತೆ. ಆಗರ್ಭ ಶ್ರೀಮಂತನ ಗೆಟಪ್ ಈಗಾಗಲೇ ಅಭಿಮಾನಿ ನೋಡಿ ಖುಷಿ ಪಟ್ಟಿದ್ದಾರೆ. ಇನ್ನೇನಿದ್ರೂ ದೊಡ್ಡ ಪರದೆಯಲ್ಲಿ ಸುದೀಪ್ ಅವರ ಪಾತ್ರವನ್ನ ದರ್ಶನ ಮಾಡಬೇಕಿದೆ.

 

ಇದೇ ವಾರ ಬಿಡುಗಡೆ
ಜನವರಿ 19 ಕ್ಕೆ ರಿಲೀಸ್

‘1st rank ರಾಜು’ ಖ್ಯಾತಿ ನರೇಶ್ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಗುರುನಂದನ್, ಅವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಸುದೀಪ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇದೇ ಜನವರಿ 19 ರಂದು ರಾಜು ಕನ್ನಡ ಮೀಡಿಯಂ ರಾಜ್ಯಾದ್ಯಂತ ತೆರೆಕಾಣುತ್ತಿದೆ.

 

source: filmibeat.com

Facebook Auto Publish Powered By : XYZScripts.com