ವಿಮರ್ಶೆ: ಥ್ರಿಲ್ ಬಯಸೋರಿಗೆ ಮೋಸ ಮಾಡಲ್ಲ ’ಸಿಪಾಯಿ’

ಸಿಪಾಯಿ ಟೈಟಲ್‌ನಲ್ಲೇ ಗಮನಸೆಳೆದಿದ್ದಂತ ಸಿನಿಮಾ. ಇದಕ್ಕೆ ಎರಡು ಕಾರಣ ಕೊಡಬಹುದು. ಒಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿಪಾಯಿ ಟೈಟಲಲ್ಲಿ ಬಂದಿರೋದು. ಇನ್ನೊಂದು ಲೂಸಿಯಾದಂತ ಪ್ರಯೋಗಾತ್ಮಕ ಚಿತ್ರದಲ್ಲಿ ಕೆಲಸ ಮಾಡಿದ ರಜತ್ ಮಯಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ.
ಈ ಚಿತ್ರದ ನಿರ್ಮಾಪಕ ಸಿದ್ದಾರ್ಥ್ ನಾಯಕನಟ ಕೂಡ. ಶ್ರುತಿ ಹರಿಹರನ್ ನಾಯಕಿ. ಚಿತ್ರದಲ್ಲಿ ನಾಯಕ ನಟ ಟಿವಿ ಕ್ರೈಂ ರಿಪೋರ್ಟರ್. ಬರೀ ವರದಿ ಮಾಡಿದ್ರೆ ಪ್ರಯೋಜನ ಇಲ್ಲ. ಮಾಫಿಯಾದ ಒಳಗೆ ಹೋಗಿ ಹೋರಾಡಬೇಕು ಅಂದ್ಕೊಳ್ತಾನೆ.
ಇದರಲ್ಲಿ ಸ್ವಲ್ಪ ಯಶಸ್ಸನ್ನೂ ಕಾಣ್ತಾನೆ. ಮಾಫಿಯಾ ಡಾನ್ ವಿರಾಟ್‌ನ (ಕೃಷ್ಣ ಹೆಬ್ಬಾಳೆ) ಕತ್ತಲ ಸಾಮ್ರಾಜ್ಯವನ್ನು ಬಯಲು ಮಾಡ್ತಾನೆ. ಈ ಮಧ್ಯೆ ತನ್ನ ಕಾಲೇಜಲ್ಲಿ ದಿವ್ಯಾಳನ್ನು (ಶ್ರುತಿ ಹರಿಹರನ್) ಪ್ಯಾರ್‌ಗೆ ಆಗ್ಬಿಡುತ್ತೆ. ಇದಕ್ಕೆ ಇನ್ನೊಬ್ಬ ರಿಪೋರ್ಟರ್ (ಅಚ್ಯುತ ಕುಮಾರ್) ಮತ್ತು ನಾಯಕ ಸಿದ್ದು ತಂದೆಯದ್ದೇನು ಅಬ್ಜೆಕ್ಷನ್ ಇರಲ್ಲ.
ಸಂಚಾರಿ ವಿಜಯ್ ಅವರಿಗೆ ಇಲ್ಲಿ ಏನೋ ದೊಡ್ಡ ರೋಲಿದೆ ಅಂದುಕೊಂಡ್ರೆ ತಪ್ಪಾಗುತ್ತೆ. ಗೆಳೆಯನಾಗಿ ಹೀರೋ ಜೊತೆ ಸದಾ ಕಾಣಿಸಿಕೊಳ್ಳುತ್ತಾರೆ ಅಷ್ಟೆ. ಒಂದು ಸಾಧಾರಣ ಕಥೆಗೆ ಎಲ್ಲಾ ಮಸಾಲೆಗಳನ್ನು ಸೇರಿಸಿ ಹೆಣೆದಿರೋ ಚಿತ್ರ ’ಸಿಪಾಯಿ’.
ಫ್ಲ್ಯಾಶ್ ಬ್ಯಾಕಲ್ಲಿ ಚಿತ್ರ ಸಾಗುತ್ತದಾದರೂ ಅದನ್ನು ಪರಿಣಾಮಕಾರಿಯಾಗಿ ತೆರೆಗೆ ತರುವಲ್ಲಿ ಸಾಧ್ಯವಾಗಿಲ್ಲ. ಚಿತ್ರದ ನಾಯಕ ನಟ ಸಿದ್ದಾರ್ಥ್ ಅಭಿನಯದಲ್ಲಿ ಇನ್ನಷ್ಟು ಮಾಗಬೇಕು. ಒಟ್ನಲ್ಲಿ ಥ್ರಿಲ್ಲರ್ ಚಿತ್ರ ಬಯಸುವವರಿಗೆ ಸಿಪಾಯಿ ನಿರಾಸೆಪಡಿಸಲ್ಲ.
ಪರಮೇಶ್ ಅವರ ಛಾಯಾಗ್ರಹಣಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು. ಅಜನೀಶ್ ಲೋಕನಾಥ್ ಅವರ ಸಂಗೀತ ಪರ್ವಾಗಿಲ್ಲ. ಶ್ರುತಿ ಹರಿಹರನ್, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ ಎಂದಿನ ಅಭಿನಯ ನೋಡಬಹುದು. ಸ್ವಲ್ಪ ಹಾಸ್ಯನೂ ಇದ್ದಿದ್ರೆ ಚೆನ್ನಾಗಿತ್ತು ಅನ್ನಿಸುತ್ತೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com