ವಿಡಿಯೋ: ಆ ‘ಕರಿಯ’ನಂತಲ್ಲ ಈ ಹೊಸ ‘ಕರಿಯ’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕರಿಯ’ ಕನ್ನಡದ ಆಲ್ ಟೈಮ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಬರುತ್ತಿರುವುದು ಗೊತ್ತಿದೆ. ಈಗ ಹೊಸ ‘ಕರಿಯ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಸೌಂಡ್ ಮಾಡ್ತಿದೆ.

Invest in share market and make huge profit, it a right time to invest in market, dont miss it.

ಹೆಸರಿಗೆ ತಕ್ಕ ಹಾಗೆ, ಇದೊಂದು ರೌಡಿಸಂ ಸಿನಿಮಾ. ಟ್ರೈಲರ್ ನಲ್ಲಿ ಮಚ್ಚು ಲಾಂಗ್ ಗಳ ಅಬ್ಬರ ಹೆಚ್ಚಾಗಿವೆ. ಹೀಗಾಗಿ, ಮತ್ತೊಮ್ಮೆ ದರ್ಶನ್ ‘ಕರಿಯ’ ಚಿತ್ರವನ್ನ ನೆನಪು ಮಾಡುತ್ತಿದೆ. ಅಂದ್ಹಾಗೆ, ‘ಕರಿಯ-2’ ಚಿತ್ರದಲ್ಲಿ ‘ಗಣಪ’ ಖ್ಯಾತಿಯ ಸಂತೋಷ್ ನಾಯಕನಾಗಿ ಅಭಿನಯಿಸಿದ್ದಾರೆ. ನಟಿ ಮಯೂರಿ ನಾಯಕಿ ಸಂತೋಷ್ ಗೆ ಜೋಡಿ ಆಗಿದ್ದಾರೆ. ಪ್ರಭು ಶ್ರೀನಿವಾಸ್ ಪ್ರಭು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕರಣ್ ಬಿ ಕೃಪಾ ಸಂಗೀತ ನೀಡಿದ್ದಾರೆ.

ಇನ್ನು ದರ್ಶನ್ ‘ಕರಿಯ’ ಚಿತ್ರವನ್ನ ನಿರ್ಮಾಣ ಮಾಡಿದ್ದ ಆನೇಕಲ್ ಬಾಲರಾಜ್ ಅವರೇ ಈಗ ‘ಕರಿಯ-2’ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ‘ಕರಿಯ-2’ ಚಿತ್ರದ ಟ್ರೈಲರ್ ಮುಂದಿದೆ ನೋಡಿ

Facebook Auto Publish Powered By : XYZScripts.com