ವಿಜಿಗೂ-ಭಟ್ರಿಗೂ ಕಟಿಪಿಟಿ ಏನಾದ್ರೂ ನಡ್ದಿದ್ಯಾ?

ಅದ್ಯಾಕೋ ಮುಂದ್ ಮುಂದಕ್ಕೆ ಹೋಗ್ತಾನೇ ಇರೋ ದುನಿಯಾ ವಿಜಯ್ ನಟನೆಯ ದನ ಕಾಯೋನು ಸಿನ್ಮಾ ಕಡೆಗೂ ಈ ವಾರಾನೇ ತೆರೆ ಕಾಣೋದಕ್ಕೆ ಮುಹೂರ್ತ ಸೆಟ್ ಆಗಿದೆ. ಯೋಗರಾಜ ಭಟ್ರು ನಿರ್ದೇಶನ ಮಾಡಿರೋ ಈ ಸಿನ್ಮಾ ಬಗ್ಗೆ ಆರಂಭದಲ್ಲೊಂದಷ್ಟು ಹವಾ ಎದ್ದಿದ್ ಬಿಟ್ರೆ ಆಮೇಲಿಂದೆಲ್ಲ ಥಂಡ ಥಂಡ.
ಅಷ್ಟುಕ್ಕೂ ಈ ಸಿನ್ಮಾ ಯಾವತ್ತೋ ತೆರೆ ಕಾಣ್ಬೇಕಿತ್ತು. ಇದು ರೆಡಿಯಾಗಿ ಭಾಳಾನೇ ಕಾಲವಾಗಿದೆ. ಹಾಗಿದ್ರೂ ಯಾಕ್ ಇವ್ರು ಸಿನ್ಮಾ ತೆರೆಗಾಣಿಸೋಕೆ ಹಿಂದೆ ಮುಂದೆ ನೋಡುದ್ರು ಎಂಬೋ ಪ್ರಶ್ನೆಗೆ ಉತ್ರ ಹುಡುಕ್ತಾ ಹೋದ್ರೆ ಭಯ ಅನ್ನೋದ್ರ ಹೊರ್ತಾಗಿ ಬ್ಯಾರೇನೂ ಕಾಣ್ಸೋದಿಲ್ಲ!
ತಮ್ ಸಿನ್ಮಾ ಬಗ್ಗೆ ವಿಪ್ರೀತ ಕಾನ್ಫಿಡೆನ್ಸ್ ಇಟ್ಕಳೋ ಯೋಗ್ರಾಜ್ ಭಟ್ರು ದನಕಾಯೋನ ವಿಚಾರ್ದಲ್ಲಿ ಅದ್ಯಾಕೋ ಅದುರ್ದಂಗಿದೆ. ಯಾಕೇಂದ್ರೆ ದೊಡ್ ಸಿನ್ಮಾಗಳು ಬಂದಾಗ್ಲೆಲ್ಲಾ ಇವ್ರ ಸೈಲೆಂಟಾಗ್ತಿದ್ರು ಅನ್ನೋ ಮಾತು ಗಾಂಧಿನಗರ್ದಲ್ಲಿ ಕೇಳಿ ಬರ್ತಿದೆ!
ಹಂಗಾದ್ರೆ ಈ ಸಿನ್ಮಾ ಭಟ್ರು ಅಂದ್ಕೊಂಡಂಗೆ ಮೂಡಿ ಬಂದಿಲ್ವಾ? ಟೀಮಿಗೂ, ವಿಜಿಗೂ ಹಾಗೂ ಭಟ್ರಿಗೂ ಕಟಿಪಿಟಿ ಏನಾದ್ರೂ ನಡ್ದಿದ್ಯಾ ಅನ್ನೋ ಪ್ರಶ್ನೆಗಳು ಹುಟ್ಕಂಡಿವೆ. ಯಾಕಂದ್ರೆ ಸರಕಿನಲ್ಲೇನೋ ಐಬಿದ್ದಾಗ್ಲೇ ಇಂಥಾ ಹಿಂಜರ್ತಗಳು ಕಾಣಿಸ್ಕೊಳ್ತವೆ!
Source: Balkani News

Leave a Reply

Your email address will not be published.

Facebook Auto Publish Powered By : XYZScripts.com