‘ಲವಲವಿಕೆ ರೀಡರ್ಸ್ ಚಾಯ್ಸ್ 2017’ ಅತ್ಯುತ್ತಮ ಜನಪ್ರಿಯ ನಾಯಕ ಯಾರು ಗೊತ್ತಾ?

ಓದುಗರೇ ಆಯ್ಕೆ ಮಾಡುವ ‘ ಲವಲವಿಕೆ ರೀಡರ್ಸ್ ಚಾಯ್ಸ್ 2017’ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಬೆಂಗಳೂರಿನ ವಿಜಯ ಕರ್ನಾಟಕ ಕಚೇರಿಯಲ್ಲಿ ನಡೆಯಿತು . ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಕಲಾವಿದರಿಗೆ ಮತ್ತು ತಂತ್ರಜ್ಞರನ್ನು ಗೌರವಿಸಲಾಯಿತು .

ಅಭಿಮಾನಿ ಓದುಗರೇ ಆಯ್ಕೆ ಮಾಡಿರುವ ‘ ಲವಲವಿಕೆ ರೀಡರ್ಸ್ ಚಾಯ್ಸ್ 2017’ ಪ್ರಶಸ್ತಿಯನ್ನು ಸ್ವೀಕರಿಸಿದ ಪುನೀತ್ ರಾಜ್ ಕುಮಾರ್ ತುಂಬಾ ಖುಷಿ ಆಗುತ್ತಿದೆ ಹಾಗೂ ಅಭಿಮಾನಿಗಳಿಗೆ ವಂದನೆಗಳು ಎಂದು ಹೇಳಿದರು.

2017 ರ ವರ್ಷದ ಅತ್ಯುತ್ತಮ ಜನಪ್ರಿಯ ನಾಯಕ ನಟ ಪ್ರಶಸ್ತಿ ಸ್ವೀಕರಿಸಿದ ಪುಣಿತ್ ಜೊತೆಗೆ ವರ್ಷದ ನಾಯಕಿ ಎಂದು ರಶ್ಮಿಕಾ ಮಂದಣ್ಣ ಸಹ ಪ್ರಶಸ್ತಿ ಸ್ವೀಕರಿಸಿದರು.

ಒಬ್ಬ ಕಲಾವಿದನಿಗೆ ಮುಖ್ಯವಾಗಿ ಬೇಕಾಗಿರುವುದು ಅವಾರ್ಡ್ ಮತ್ತು ರಿವಾರ್ಡ್ . ಅದಾದ ಮೇಲೆ ಕಲಾವಿದನನ್ನು ದೀರ್ಘ ಕಾಲ ನೆನಪಿಟ್ಟುಕೊಳ್ಳುವಂತೆ ಮಾಡೋದು ಚಪ್ಪಾಳೆ ಹಾಗೂ ಪ್ರಶಸ್ತಿಗಳು . ಹೀಗಾಗಿ ಕಲಾವಿದನ ಬದುಕಲ್ಲಿ ಎಷ್ಟು ಉತ್ತಮ ಸಿನಿಮಾಗಳು ಹಾಗೂ ಒಳ್ಳೆಯ ಪ್ರಶಸ್ತಿಗಳು ಬರುತ್ತಾ ಹೋಗುತ್ತವೆಯೋ ಅದು ಆ ನಟನಿಗೆ ದೊಡ್ಡ ಬೆಂಬಲವಾಗುತ್ತದೆ ‘ ಎಂದು ಪುನೀತ್ ರಾಜ್ ಕುಮಾರ್ ನುಡಿದಿದ್ದಾರೆ .

Facebook Auto Publish Powered By : XYZScripts.com