ರಿಯಲ್ ಸ್ಟಾರ್ ಉಪೇಂದ್ರಗೆ ಇರುವ ಮೂರು ಕೆಟ್ಟ ಅಭ್ಯಾಸ ಯಾವುದು?.. ಇಲ್ಲಿ ಓದಿ

ರಿಯಲ್ ಸ್ಟಾರ್ ಉಪೇಂದ್ರ ಇದೀಗ ತಮಗೆ ಇರುವ ಕೆಟ್ಟ ಅಭ್ಯಾಸದ ಬಗ್ಗೆ ಮಾತನಾಡಿದ್ದಾರೆ. ಅದು ಶಿವಣ್ಣನ ಮುಂದೆ. ಹೌದು ಕಿರುತೆರೆಯಲ್ಲಿ ಹೊಸದಾಗಿ ಶುರು ಆಗಿರುವ ‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮ ನಿನ್ನೆ(ಭಾನುವಾರ) ದಿಂದ ಶುರು ಆಗಿದೆ. ಈ ಕಾರ್ಯಕ್ರಮ ಮೊದಲ ಅತಿಥಿಯಾಗಿ ಉಪೇಂದ್ರ ಮತ್ತು ಗುರುಕಿರಣ್ ಆಗಮಿಸಿದ್ದಾರೆ.

‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮ ಮುಖ್ಯವಾಗಿ ಸ್ನೇಹಿತರ ಬಗ್ಗೆ ಇರುವ ಕಾರ್ಯಕ್ರಮ ಪ್ರತಿ ವಾರ ಕೂಡ ಇಬ್ಬರು ಸ್ನೇಹಿತರು ಕಾರ್ಯಕ್ರಮಕ್ಕೆ ಬರುತ್ತಾರೆ. ಇದೊಂದು ಟಾಕ್ ಶೋ ಆಗಿದ್ದು, ಸಿಕ್ಕಾಪಟ್ಟೆ, ತರ್ಲೆ ತಮಾಷೆ ಇರುತ್ತದೆ. ಇನ್ನು ಶಿವಣ್ಣ ಮತ್ತು ಉಪೇಂದ್ರ ಒಟ್ಟಿಗೆ ಸೇರಿದಾಗ ಆ ತಮಾಷೆ ತರ್ಲೆ ಡಬಲ್ ಆಗುತ್ತದೆ. ‘ನಂ 1 ಯಾರಿ ವಿತ್ ಶಿವಣ್ಣ’ ಮೊದಲ ಸಂಚಿಕೆ ಸಖತ್ ಮನರಂಜನೆ ನೀಡುವಂತೆ ಇತ್ತು. ಈ ಕಾರ್ಯಕ್ರಮದಲ್ಲಿ ಮನಸು ಬಿಚ್ಚಿ ಉಪೇಂದ್ರ ಮತ್ತು ಗುರುಕಿರಣ್ ಮಾತನಾಡಿದರು.

ಕಾರ್ಯಕ್ರಮದ ಮೊದಲ ಸುತ್ತಿನ ಮೊದಲ ಪ್ರಶ್ನೆಯನ್ನು ಶಿವಣ್ಣ ಉಪೇಂದ್ರ ಅವರಿಗೆ ಹೇಳಿದರು. ನಿಮ್ಮ ಮೂರು ಕೆಟ್ಟ ಅಭ್ಯಾಸ ಏನು ಎಂದು ಶಿವಣ್ಣ ಪ್ರಶ್ನೆ ಮಾಡಿದರು. ಶಿವಣ್ಣನ ಪ್ರಶ್ನೆಗೆ ಉಪ್ಪಿ ಪಟ್ ಅಂತ ಉತ್ತರಿಸಿದರು.

ಉಪೇಂದ್ರ ಅವರಿಗೆ ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆ ಕೋಪ ಬರುತ್ತದೆಯಂತೆ. ನನಗೆ ಕೋಪ ಹಾಗೆ ಬಂದು ಹೀಗೆ ಹೋಗುತ್ತದೆ. ಇದು ನನ್ನ ಮೊದಲ ಕೆಟ್ಟ ಅಭ್ಯಾಸ ಎಂದು ಉಪೇಂದ್ರ ಹೇಳಿದರು.

ಉಪೇಂದ್ರ ಗೊತ್ತಾಗದೆ ಕೆಲವು ಬಾರಿ ಏನಾದರೂ ಮಾತಾಡಿ ಬಿಡುತ್ತಾರಂತೆ. ಇದು ಅವರ ಎರಡನೇ ಕೆಟ್ಟ ಅಭ್ಯಾಸವಂತೆ

”ಎಲ್ಲರೂ ನನ್ನನ್ನು ಬುದ್ದಿವಂತ ಅಂತ ಅಂದುಕೊಂಡಿದ್ದಾರೆ. ಆದರೆ ನಾನು ದಡ್ಡ”. ಎಂದು ಉಪ್ಪಿ ಹೇಳಿದರು. ಅದಕ್ಕೆ ಶಿವಣ್ಣ ನಾನು ಈ ಮೂರನೇ ಉತ್ತರವನ್ನು ಒಪ್ಪುವುದಿಲ್ಲ ಎಂದು ನಕ್ಕರು.

Facebook Auto Publish Powered By : XYZScripts.com