ರಾಷ್ಟ್ರದ್ರೋಹ ಪ್ರಕರಣ ರಮ್ಯಾ ವಿರುದ್ಧದ ಕೇಸ್ ವಜಾ

ಕೊಡಗು:2016 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಮ್ಯಾ ಅಲ್ಲಿಂದ ವಾಪಸ್ಸಾದ ಬಳಿಕ “ಪಾಕಿಸ್ತಾನ ನರಕವಲ್ಲ, ಅಲ್ಲಿರುವವರು ಒಳ್ಳೆಯವರು ಎಂದು ಹೇಳಿ ವಿವಾದವನ್ನು ಹುಟ್ಟುಹಾಕಿದ ರಮ್ಯ ಅವರ ವಿರುದ್ದ ವಕೀಲ ಕೆ. ವಿಠಲ ಗೌಡ ಎನ್ನುವವರು ಕೊಡಗಿನ ಸೋಮವಾರ ಪೇಟೆ ನ್ಯಾಯಾಲಯದಲ್ಲಿ ದೇಶದ್ರೋಹದ ಕೇಸನ್ನು ದಾಖಲು ಮಾಡಿದ್ದರು.

ಇಂದು ರಮ್ಯ ಅವರ ವಿರುದ್ಧ ದಾಖಲಾಗಿದ್ದ ರಾಷ್ಟ್ರದ್ರೋಹ ಪ್ರಕರಣವನ್ನು ಸೋಮಾರಪೇಟೆ ನ್ಯಾಯಾಲಯ ಪ್ರಕರಣವನ್ನು ವಜಗೊಳಿಸಿದೆ.

ಇದೇ ವೇಳೆ ನ್ಯಾಯಾಲಯ ಪಾಕಿಸ್ತಾನವನ್ನು ಅಧಿಕೃತವಾಗಿ ಶತ್ರು ರಾಷ್ಟ್ರ ಎಂದು ಪರಿಗಣಿಸಲಾಗಿಲ್ಲ. ಅಥವಾ ಸರ್ಕಾರವೂ ಸಹ ಪಾಕಿಸ್ತಾನವನ್ನು ಅಧಿಕೃತವಾಗಿ ಶತ್ರು ರಾಷ್ಟ್ರ ಎಂದು ಘೋಷಿಸಲಾಗಿಲ್ಲ. ಪಾಕಿಸ್ತಾನದ ಸೇನೆ ಹಾಗೂ ಭಯೋತ್ಪಾದಕರಿಂದ ನಮ್ಮ ದೇಶದ ಯೋಧರನ್ನು ಹತ್ಯೆಯಾಗಿದ್ದಾರೆ, ಹಾಗೇ ಆಗಿರುವ ಕಾರಣಕ್ಕೆ ಪಾಕಿಸ್ತಾನದ ಜನತೆಯನ್ನು ತಪ್ಪಿತಸ್ಥರೆಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದೇ ವೇಳೆ ನ್ಯಾಯಾಲಯ ರಮ್ಯಾ ಅವರ ವಿರುದ್ಧ ಸೆಕ್ಷನ್ 124-A ಪ್ರಕಾರ ದಾಖಲಾದ ರಾಷ್ಟ್ರದ್ರೋಹ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಅಷ್ಟೇ ಅಲ್ಲದೇ ರಮ್ಯಾ ಅವರ ಹೇಳಿಕೆ ರಾಷ್ಟ್ರದ್ರೋಹ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿರುವ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿದೆ.

Courtesy: Kannada News Now

Facebook Auto Publish Powered By : XYZScripts.com