ರಾಪಿಡ್ ರಶ್ಮಿ ನಾ ಇಲ್ಲ ಕಿರಿಕ್ ರಶ್ಮಿ ನಾ?

ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿಗಳ ಹೆಸರು ಹೊರಬೀಳುತ್ತಿದ್ದಂತೆ ಜನರಲ್ಲಿ ಕುತೂಹಲ ಕೆರಳಿಸಿದ ಹೆಸರುಗಳಲ್ಲಿ ರಾಪಿಡ್ ರಶ್ಮಿ ಹೆಸರು ಕೂಡ ಒಂದು, ರೇಡಿಯೋ ಜಾಕಿ ಯಾಗಿ ಕೆಲಸ ನಿರ್ವಹಿಸುತ್ತಿದ್ದ ರಶ್ಮಿ ತಮ್ಮ ಮಾತಿನಿಂದಲೇ ಅನೇಕ ವಿವಾದಗಳನ್ನು ತನ್ನ ಮೇಲೆ ಎಳೆದುಕೊಂಡಿದ್ದರು ನಂತರ ಕ್ಷಮೆಯನ್ನು ಕೇಳಿದ್ದರು, ಇದರಿಂದ ಸ್ವಾಭಾವಿಕವಾಗಿಯೇ ಬಿಗ್ ಬಾಸ್ ನಲ್ಲಿ ಏನು ನಡೆಯುತ್ತದೋ ಎಂಬ ಕುತೂಹಲ ಮನೆ ಮಾಡಿತ್ತು.

ಕಳೆದ 3 ವಾರಗಳಿಂದ ರಶ್ಮಿಯವರನ್ನು ಗಮನಿಸುತ್ತಿರುವ ವೀಕ್ಷಕರಿಗೆ ಈಗ ಅವರ ಸ್ವಭಾವ ಎಂಥದ್ದು ಎಂಬುದು ಮನನವಾಗಿದೆ. ಎಲ್ಲರ ಜೊತೆ ತನ್ನ ಉಡಾಫೆ ಮನೋಭಾವವನ್ನು ತೋರಿಸುವ ರಶ್ಮಿ ಬಿಗ್ ಬಾಸ್ ನ ಇತರ ಸ್ಪರ್ಧಿಗಳ ಮಾತನ್ನ ಲಕ್ಷಿಸದೆ ಮಾತಿಗೆ ಮೊದಲು ಜಗಳಕ್ಕೆ ಇಳಿಯುತ್ತಾರೆ. ಮೊದಲ ವಾರದಲ್ಲೇ ಆಂಡ್ರೂ ಅವರ ಜೊತೆ ವಯುಕ್ತಿಕ ಜಗಳಕ್ಕೆ ಇಳಿದು ಅವರ ಕುಟುಂಬದವರನ್ನು ನಿಂದಿಸಿ ಕಿಚ್ಚ ರವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಈಗ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ, ಈ ವಾರ ಜಯಶ್ರೀ ಯವರ ಜೊತೆ ನಡೆದ ಜಗಳವಂತೂ ಪರಾಕಾಷ್ಠೆಯನ್ನೇ ಮೀರುವಂತಿತ್ತು, ಬಿಗ್ ಬಾಸ್ ನಲ್ಲಿ ನನ್ನನು ಯಾರು ಪ್ರಶ್ನಿಸುವಂತಿಲ್ಲ ಎಂಬ ಮನೋಭಾವನೆ ಹೊಂದಿರುವ ರಶ್ಮಿ ಮನೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನ ಬಂದಂತೆ ವರ್ತಿಸುತ್ತಿದ್ದಾರೆ, ಜಯಶ್ರೀ ಯವರು ಮೊಟ್ಟೆಯ ಬಗ್ಗೆ ಪ್ರಶ್ನಿಸಿದಾಗ ನಾನು ನನ್ನ ಅಮ್ಮನ ಮಾತೇ ಕೇಳಲ್ಲ ನಿಮ್ಮ ಮಾತು ಯಾಕೆ ಕೇಳಲಿ ಎಂದಿದ್ದು ಮನೆಯವರ ಕೋಪಕ್ಕೆ ಕಾರಣವಾಯಿತು, ಮಾತು ಮುಂದುವರಿದು ನಿಮಗೆ ಜನರು ಮೊಟ್ಟೆ ಯಲ್ಲೇ ಹೆಡೆಯಲಿದ್ದಾರೆ ಎಂಬ ಮಟ್ಟವನ್ನು ತಲುಪಿತು. ನಂತರ ಕವಿತಾ ಅವರು ಮನವರಿಕೆ ಮಾಡಲು ಪ್ರಯತ್ನಿಸಿದಾಗ ಅವರ ವರ್ತನೆ ಎಲ್ಲೇ ಮೀರಿದಂತಿತ್ತು.

ರಶ್ಮಿಯವರ ವರ್ತನೆಯಿಂದ ಬಿಗ್ ಬಾಸ್ ಮನೆಯಲ್ಲಿ ಜಗಳವಾಡಲೆಂದೇ ಬಂದಿದ್ದಾರೇನೋ ಎಂಬ ಭಾವನೆ ಜನರಲ್ಲಿ ಮೂಡಿದೆ.

Facebook Auto Publish Powered By : XYZScripts.com