ರಾಧಿಕಾ ಪಂಡಿತ್ ಗೆ ಹುಟ್ಟುಹಬ್ಬದ ಸಂಭ್ರಮ

ಇಂದು ನಟಿ ರಾಧಿಕಾ ಪಂಡಿತ್ ಅವರಿಗೆ 34ನೇ ಹುಟ್ಟುಹಬ್ಬದ ಸಂಭ್ರಮ. ರಾಧಿಕಾ ತಮ್ಮ ಹುಟ್ಟು ಹಬ್ಬವನ್ನು ತಮ್ಮ ಮನೆಯಲ್ಲಿ ಕುಟುಂಬ ವರ್ಗದವರು ಮತ್ತು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

ಇಂದು ನಸುಕಿನ ಜಾವದಿಂದಲೇ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕಿಯ ಮನೆಯ ಹತ್ತಿರ ಜಮಾಯಿಸಿ ಮೊಗ್ಗಿನ ಮನಸ್ಸು ನಾಯಕಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

ರಾಧಿಕಾ ಅವರು ಅಭಿಮಾನಿಗಳು ತಂದಿರುವ ಕೇಕನ್ನು ಕತ್ತರಿಸಿ ಹಂಚಿ ಸಂತೋಷಪಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಧಿಕಾ ಪಂಡಿತ್, ನನಗೆ ಬರ್ತ್‍ಡೇ ಆಚರಣೆ ಅಂದ್ರೆ ತುಂಬಾ ಕಾತರ ಇರುತ್ತದೆ. ಯಾಕಂದ್ರೆ ಆ ದಿನ ನಮಗೆ ಜಾಸ್ತಿ ಪ್ರಾಮುಖ್ಯತೆ ಇರತ್ತೆ. ಅಭಿಮಾನಿಗಳು ನಮ್ಮ ಹುಟ್ಟುಹಬ್ಬವನ್ನು ಆಚರಿಸುವಾಗ ಖುಷಿಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಖುಷಿಯಿಂದ ಹೇಳಿಕೊಂಡರು.

ಪತ್ನಿ ಹುಟ್ಟು ಹಬ್ಬದ ಸಂದರ್ಭದಲ್ಲಿ ಜೊತೆಗಿದ್ದ ನಟ ಯಶ್, ನಮ್ಮ ಹುಟ್ಟುಹಬ್ಬವೆಂದರೆ ಅಭಿಮಾನಿಗಳಿಗೆ, ಜನರಿಗೆ ಕಾತರ, ಕುತೂಹಲವಿರುತ್ತದೆ. ಬೆಳಗ್ಗೆಯಿಂದಲೇ ಅವರು ನಮ್ಮ ಮನೆ ಮುಂದೆ ಬಂದು ಹುಟ್ಟುಹಬ್ಬ ಆಚರಿಸಲು ಕಾಯುತ್ತಿರುತ್ತಾರೆ. ಈ ದಿನ ಅಭಿಮಾನಿಗಳಿಗೆ ಮೀಸಲು ಎಂದು ಹೇಳಿದರು.

Facebook Auto Publish Powered By : XYZScripts.com