ರಾಜ್ ಪತ್ನಿ ಪಾರ್ವತಮ್ಮ ಅವರ ಸಿನಿಮಾ ನಿರ್ಮಾಣದ ಅಚ್ಚರಿ

ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರಮುಖ ನಿರ್ಮಾಪಕರಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಡಿಸೆಂಬರ್ 1936ರ ಡಿಸೆಂಬರ್ 6ರಂದು ಜನಿಸಿದ ಪಾರ್ವತಮ್ಮ ರಾಜ್ ಕುಮಾರ್, ಡಾ ರಾಜ್ ಕುಮಾರ್ ಧರ್ಮಪತ್ನಿ. ಇಂದು ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಹುಟ್ಟುಹಬ್ಬ. ಈ ದಿನವನ್ನು ಪಾರ್ವತಮ್ಮ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಆಚರಿಸಿಕೊಂಡರು. ಚಿತ್ರರಂಗದ ಗಣ್ಯರು ಕೂಡ ಪಾರ್ವತಮ್ಮ ರಾಜ್ ಕುಮಾರ್ ಗೆ ಶುಭಕೋರಿದರು.
ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕಿ ಹಾಗೂ ಚಿತ್ರ ವಿತರಕಿಯಾಗಿರುವ ಪಾರ್ವತಮ್ಮ ರಾಜ್ ಕುಮಾರ್ ವಜ್ರೇಶ್ವರಿ ಮೂವೀಸ್ ನಿರ್ಮಾಣದಡಿ ಹಲವು ಹಿಟ್ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.
ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣಕ್ಕೆ ಕೈಹಾಕಿದ ಸನ್ನಿವೇಶ ಕೊಂಚ ಇಂಟರೆಸ್ಟಿಂಗ್. ರಾಜ್ ಕುಮಾರ್ ಒಂದು ಕಾಲದಲ್ಲಿ ಅವಕಾಶ ಸಿಕ್ಕಿದ್ದ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರಂತೆ. ಆದರೆ ಸಿನಿಮಾ ಮುಗಿದ ಮೇಲೆ ನಿರ್ಮಾಪಕರು ದುಡ್ಡು ಕೊಡದೆ ಕೈ ಎತ್ತಿ ಬಿಡುತ್ತಿದ್ದರು. ಇದರಿಂದ ಬೇಸರಗೊಂಡ ಪಾರ್ವತಮ್ಮ ರಾಜ್ ಕುಮಾರ್ ನಷ್ಟ ಮಾಡಿಕೊಂಡು ಚಿತ್ರತೆಗೀಬೇಡಿ ಎಂದು ತಾವೇ ನಿರ್ಮಾಣಕ್ಕೆ ತೊಡಗಿದರಂತೆ. ಬಳಿಕ ಹಣದ ಹೊಳೆಯೇ ಹರಿಯಿತು.
ತ್ರಿಮೂರ್ತಿ ಅವರ ಮೊದಲ ಪ್ರೋಡಕ್ಷನ್ ಚಿತ್ರ. ಇದರಲ್ಲಿ ರಾಜ್ ಕುಮಾರ್ ಹಿರೋ. ಅಷ್ಟೇ ಅಲ್ಲದೆ ರಾಜ್ ಕುಮಾರ್ ಅಭಿನಯದ ಹಾಲು ಜೇನು, ಕವಿರತ್ನ ಕಾಳಿದಾಸ ಮ್ತತು ಜೀವನ ಚೈತ್ರೈ ಚಿತ್ರಗಳನ್ನು ನಿರ್ಮಿಸಿದ್ದು ಪಾರ್ವತಮ್ಮ ರಾಜ್ ಕುಮಾರ್.
ಶಿವರಾಜ್ ಕುಮಾರ್ ಅಭಿನಯದ ಆನಂದ್, ಓಂ, ಜನುಮದ ಜೋಡಿ, ಸೇರಿದಂತೆ ಹಲವಾರು ಚಿತ್ರಗಳನ್ನು ಪಾರ್ವತಮ್ಮ ನಿರ್ಮಿಸಿ ಭೇಷ್ ಎನಿಸಿಕೊಂಡಿದ್ದಾರೆ
ಪಾರ್ವತಮ್ಮ ಸಿನಿ ರಂಗದ ಸಾಧನೆಗಾಗಿ ಆಕೆಗೆ ಕನ್ನಡ ರಾಜ್ಯೋತ್ಸವ, ಜೀವಮಾನ ಸಾಧನೆಗಾಗಿ ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಮುಡಿಗೇರಿದೆ.
Courtesy: Balkani News

Facebook Auto Publish Powered By : XYZScripts.com