ರಾಜ್ಯೋತ್ಸವದಂದು ವಿಭಿನ್ನವಾಗಿ ತಮ್ಮ ಮುಂದಿನ ಚಿತ್ರದ ಟೈಟಲ್ ಬಿಡುಗಡೆ ಮಾಡಲಿದ್ದಾರೆ ಪವರ್ ಸ್ಟಾರ್.. ಹೇಗೆ?.. ಇಲ್ಲಿ ಓದಿ

ಚಂದನವನದಲ್ಲಿ ಪುನೀತ್​ ಏನೇ ಮಾಡಿದರೂ ಅದರಲ್ಲಿ ಅಭಿಮಾನಿಗಳಿಗೆ ಒಂದು ಸಂದೇಶ ಇದ್ದೇ ಇರುತ್ತೆ. ಅದರಲ್ಲೂ ಅಭಿಮಾನಿಗಳನ್ನು ದೇವರು ಎಂದ ರಾಜಣ್ಣನ ಮಗನಾದ ಪುನೀತ್​ ಸಹ ಅಭಿಮಾನಿಗಳನ್ನು ತಂದೆಯಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

ಹೌದು ಅಭಿಮಾನಿಗಳು ಎಲ್ಲೇ ಸಿಗಲಿ, ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲಿ ಅವರಿಗೆ ಪುನೀತ್​ ಅಭಿಮಾನಿಗಳಿಗೆ ಲಭ್ಯವಿರುತ್ತಾರೆ. ಅಭಿಮಾನಿಗಳು ಪ್ರೀತಿಯಿಂದ ನೀಡಿದ ಉಡುಗೊರೆಯ ಚಿತ್ರಗಳನ್ನು ಅವರು ಫೇಸ್​ಬುಕ್​ನಲ್ಲೂ ಶೇರ್​ ಮಾಡುತ್ತಾರೆ.

ಆದರೆ ಪುನೀತ್​ ಈ ಬಾರಿ ತಮ್ಮ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅವರ ಹೊಸ ಸಿನಿಮಾದ ಟೈಟಲ್​ ಅನ್ನು ಈ ಬಾರಿ ಅಭಿಮಾನಿಗಳ ಮಧ್ಯದಲ್ಲಿ, ಅಭಿಮಾನಿಯಿಂದಲೇ ಬಿಡುಗಡೆ ಮಾಡಿಸಲಿದ್ದಾರೆ.

ಹೌದು ಈ ಕುರಿತಂತೆ ಖುದ್ದು ಪುನೀತ್​ ತಮ್ಮ ಫೇಸ್​ಬುಕ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ. ನವಂಬರ್ ಒಂದರಂದು ಕನ್ನಡ ರಾಜ್ಯೋತ್ಸವದಂದೇ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಕಾವೇರಿ ಚಿತ್ರಮಂದಿರದಲ್ಲಿ ಈ ಟೈಟಲ್​ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಿಗ್ಗೆ 11ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪುನೀತ್​ ರಾಜ್​ಕುಮಾರ್​, ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಭಾಗವಹಿಸಲಿದ್ದಾರೆ.

‘ರಾಜಕುಮಾರ’ದಂತಹ ಹಿಟ್​ ಸಿನಿಮಾ ನೀಡಿರುವ ಸಂತೋಷ್ ಆನಂದ್​ ರಾಮ್​ ಅವರೇ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಈ ಸಿನಿಮಾ ಮಾಡುವುದಾಗಿ ಪ್ರಕಟಿಸಿದಾಗಿನಿಂದಲೇ ಪ್ರೇಕ್ಷಕರಲ್ಲಿ ತುಂಬಾ ನಿರೀಕ್ಷೆ ಹುಟ್ಟಿಸಿದೆ.

Facebook Auto Publish Powered By : XYZScripts.com