‘ರಾಜಾ ವಿಷ್ಣುವರ್ಧನ’ ಕಿಚ್ಚಾ ಸುದೀಪ್?

ಕಿಚ್ಚಾ ಸುದೀಪ್ ಅವರ ನಟನೆಯ ಅಭಿಮಾನಿಗಳೆಲ್ಲ ಅವರನ್ನೊಂದು ಐತಿಹಾಸಿಕ ಕಥಾ ವಸ್ತುವುಳ್ಳ ಪಾತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಲು ಕಾತರರಾಗಿದ್ದರು. ಈಗ ಹರಡಿಕೊಂಡಿರೋ ಸುದ್ದಿಯೊಂದು ಆ ಕಾತರವನ್ನ ಸಾಕಾರಗೊಳಿಸುವ ಸೂಚನೆಯಂತಿದೆ. ಯಾಕೆಂದರೆ ಅವರೀಗ ರಾಜಾ ವಿಷ್ಣುವರ್ಧನನಾಗಿ ಅವತಾರವೆತ್ತಲು ಅಣಿಯಾಗುತ್ತಿದ್ದಾರೆ!ಅಂದಹಾಗೆ, ಸುದೀಪ್ ಅವರನ್ನು ಇಂಥಾದ್ದೊಂದು ಸವಾಲಿನ ಪಾತ್ರದಲ್ಲಿ ಕಾಣಿಸಲು ಮುಂದಾಗಿರುವವರು ನಿರ್ದೇಶಕ ನಾಗಶೇಖರ್. ಈ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ದೊಡ್ಡ ಬಜೆಟ್ಟಿನ ಚಿತ್ರವಾಗಿಯೂ ಹೊರ ಹೊಮ್ಮುವ ಲಕ್ಷಣಗಳಿವೆ. ಒಂದು ಮೂಲದ ಪ್ರಕಾರ ರಾಜಾ ವಿಷ್ಣುವರ್ಧನನ ಅಂದಾಜು ಬಜೆಟ್ ಅಖಂಡ ಅರವತ್ತು ಲಕ್ಷ!

ಗಾಂಧಿನಗರದಗುಂಟ ಹರಿದಾಡುತ್ತಿರುವ ಈ ಸುದ್ದಿಯ ಬಗ್ಗೆ ಖುದ್ದು ನಿರ್ದೇಶಕ ನಾಗಶೇಖರ್ ಅವರನ್ನೇ ಮಾತಾಡಿಸಿದರೆ, `ನಾನು ಸುದೀಪ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಮನಸಲ್ಲಿಟ್ಟುಕೊಂಡು ಒಂದು ಕಥೆ ಮಾಡುತ್ತಿರೋದು ಸತ್ಯ.

ಅದಿನ್ನೂ ತುಂಬಾ ಕೆಲಸ ಬೇಡುತ್ತದೆ. ಆ ನಂತರ ಆ ಕಥೆಯನ್ನು ಸುದೀಪ್ ಅವರಿಗೆ ಹೇಳಬೇಕಿದೆ ಅನ್ನುತ್ತಾರೆ. 

ಆದರೆ, ನಾಗಶೇಖರ್ ಹೀಗಂದರೂ ಕೂಡಾ ಈಗಾಗಲೇ ಈ ಕಥೆಯ ವಿಚಾರ ಸುದೀಪ್ ಅವರಿಗೂ ತಲುಪಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಯಾವ ಪಾತ್ರವನ್ನಾದರೂ ತನ್ಮಯರಾಗಿ ನಟಿಸೋ ತಾಕತ್ತಿರೋ ಕಿಚ್ಚಾ ಸುದೀಪ್ ರಾಜಾ ವಿಷ್ಣುವರ್ಧನನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಅವರು ಇಂಥಾದ್ದೊಂದು ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬುದೇ ಚಿತ್ರ ಪ್ರೇಮಿಗಳಲ್ಲೊಂದು ಥ್ರಿಲ್ ಹುಟ್ಟಿಸಿದೆ.

ಮಾಸ್ತಿಗುಡಿ ಚಿತ್ರವನ್ನು ಭಾರೀ ಕನಸಿಟ್ಟುಕೊಂಡು ಮಾಡಿ ಆ ಬಳಿಕ ನಡೆದ ಅಚಾತುರ್ಯದಿಂದ ಘಾಸಿಗೊಂಡಿರುವವರು ನಾಗಶೇಖರ್. ಅಂಥಾದ್ದೊಂದು ಆಘಾತದಿಂದ ಹೊರ ಬಂದು ಅವರೀಗ ರಾಜಾ ವಿಷ್ಣುವರ್ಧನನ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಇನ್ನುಳಿದಂತೆ ಈ ಭಾರೀ ಬಜೆಟ್ಟಿನ ಚಿತ್ರ ನಿರ್ಮಾಣ ಮಾಡುವ ಎಂಟೆದೆಯ ನಿರ್ಮಾಪಕರ್‍ಯಾರು? ಪಾತ್ರ ವರ್ಗದ ರೂಪುರೇಷೆಗಳೇನು ಎಂಬುದೆಲ್ಲ ಹೊರ ಬೀಳಬೇಕಿದೆ.

Courtesy: Cinebuzz

Facebook Auto Publish Powered By : XYZScripts.com