ರಾಜಕುಮಾರ್ ಮೊಮ್ಮಗ ಗುರು ರಾಜ್ ಕುಮಾರ್ ಹೆಸರು ಬದಲು, ಹೊಸ ಹೆಸರೇನು ಇಲಿ ಓದಿ

ಚಿತ್ರರಂಗದಲ್ಲಿ ಹೆಸರು ಬದಲಾಯಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಕೆಲವರು ಒಂದೇ ಹೆಸರಿನವರು ಮತ್ತೊಬ್ಬರು ಇದ್ದಾಗ ತಮ್ಮ ಹೆಸರನ್ನ ಬದಲಾಯಿಸಿಕೊಂಡರೆ ಮತ್ತೆ ಕೆಲವರ ಹೆಸರನ್ನ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಬದಲಾವಣೆ ಮಾಡುತ್ತಾರೆ. ಇನ್ನು ಅನೇಕರು ಅದೃಷ್ಟಕ್ಕೂ ಅಥವಾ ಮತ್ಯಾವುದೋ ಕಾರಣಕ್ಕೂ ಬದಲಾವಣೆ ಮಾಡಿಕೊಳ್ಳುತ್ತಾರೆ.

ಎರಡು ದಿನಗಳ ಹಿಂದೆಯಷ್ಟೇ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಗುರು ರಾಜ್ ಕುಮಾರ್ ತಮ್ಮ ಹೆಸರನ್ನ ಬದಲಾವಣೆ ಮಾಡಿಕೊಂಡಿದ್ದಾರೆ. ಯುವ ರಾಜ್ ಕುಮಾರ್ ಎಂದು ಹೆಸರು ನಾಮಕರಣ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲವಿದೆ. ಗುರು ಯಾಕೆ ಹೆಸರು ಬದಲಾಯಿಸಿಕೊಂಡರು ಎಂದು. ಈ ಪ್ರಶ್ನೆಗೆ ಯುವ ರಾಜ್ ಕುಮಾರ್ ಅವರೇ ಉತ್ತರಿಸಿದ್ದಾರೆ.

‘ನಮ್ಮ ಕುಟುಂಬದಲ್ಲಿನ ಹೆಸರು ಬದಲಾವಣೆ ಬಗ್ಗೆ ಒಂದು ಚಿಕ್ಕ ಕಥೆ ನಮ್ಮ ಮುತ್ತಾತ ಗುರುವೇ ಗೌಡರ ಹೆಸರು ನಾಟಕ ರಂಗಕೋಸ್ಕರ ಪುಟ್ಟಸ್ವಾಮಿ ಆಯ್ತು. ನಂತರ ನಮ್ಮ ತಾತನವರ ಹೆಸರು ಮುತ್ತುರಾಜ್ ರಿಂದ ಚಿತ್ರರಂಗಕೊಸ್ಕರ ‘ರಾಜ್ ಕುಮಾರ್’ ಎಂದು ಬದಲಾಯಿಸಲಾಯ್ತು. ನಮ್ಮ ದೊಡ್ಡಪ್ಪ ನವರಿಗೆ ನಮ್ಮ ತಾತ ಅವರ ತಂದೆಯ ಹೆಸರು ಪುಟ್ಟಸ್ವಾಮಿ ಎಂದು ಇಟ್ಟಿದ್ದರು ಮತ್ತೆ ಚಿತ್ರರಂಗೋಸ್ಕರ ಶಿವರಾಜ್ ಕುಮಾರ್ ಆಯಿತು.

ಚಿಕ್ಕಪ್ಪನ ಹೆಸರು ಲೋಹಿತ್, ನಮ್ಮ ಅಜ್ಜಿಯವರು ಜನ್ಮ ನಾಮದ ಪ್ರಕಾರ ‘ಪುನೀತ್’ ಎಂದು ಇಟ್ಟರು. ನನ್ನ ಹೆಸರು ನಮ್ಮ ಮುತ್ತಾತನ ಹೆಸರು ಎಂದು ನಮ್ಮ ತಾತ ಇಟ್ಟಿದ್ದರು. ನಮ್ಮ ಅಜ್ಜಿ ನನಗೆ ಹೇಳಿದ್ದರು ಜನ್ಮ ನಾಮದ ಪ್ರಕಾರ ಹೆಸರು ಬದಲಾಯಿಸಬೇಕು ಎಂದು. ಅದಕ್ಕೆ ಇನ್ನು ಮುಂದೆ ಎಲ್ಲಾ ವ್ಯವಹಾರಕ್ಕೂ ‘ಯುವರಾಜ್ ಕುಮಾರ್’. ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆ ಇನ್ನು ಮುಂದೆ ರಾಜ್ ಕುಮಾರ್ ಅವರ ಕಿರಿಯ ಮೊಮ್ಮಗ ಎಲ್ಲರ ನಡುವೆ ಯುವರಾಜ ನಾಗಿ ಕಾಣಿಸಿಕೊಳ್ಳಲಿದ್ದಾರೆ.

Facebook Auto Publish Powered By : XYZScripts.com