‘ರಾಜಕುಮಾರ’ನ ಮುಂದೆ ಮಂಡಿಯೂರಿದ ‘ಬಾಹುಬಲಿ-2’

Rajakumarana munde mandiyurida ‘Bhahubali-2’

ವರನಟ ಡಾ. ರಾಜ್ ಕುಮಾರ್ ಹೆಸರು ಉಳಿಸಿದ ‘ರಾಜಕುಮಾರ’ ಚಿತ್ರವೀಗ ಕರ್ನಾಟಕದಲ್ಲಿ ಕನ್ನಡ ಚಿತ್ರಗಳದ್ದೇ ಮೇಲುಗೈ ಎಂಬುದನ್ನು ಸಾಭೀತು ಪಡಿಸಿದೆ. ವಿಶ್ವದಾದ್ಯಂತ ಸಿನಿ ಪ್ರಿಯರ ಕಣ್ಣರಳಿಸಿದ ‘ಬಾಹುಬಲಿ-2’ ಚಿತ್ರಕ್ಕಿಂತ ಹೆಚ್ಚಿನ ಶೋಗಳ ಪ್ರದರ್ಶನವನ್ನು ಬೆಂಗಳೂರಿನಲ್ಲಿ ‘ರಾಜಕುಮಾರ’ ಚಿತ್ರ ಪಡೆಯುತ್ತಿದೆ.

ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಬಾಹುಬಲಿ-2’ ಚಿತ್ರಕ್ಕೆ ಕ್ರಿಯೇಟ್ ಆಗಿದ್ದ ಹೈಪ್ ನೋಡಿದರೆ ಬೆಂಗಳೂರಿನಲ್ಲಿ ಅನ್ಯಭಾಷಿಕರೇ ಹೆಚ್ಚಿರುವ ಕಾರಣ ಕನ್ನಡ ಚಿತ್ರಗಳಿಗಿಂತ ಹೆಚ್ಚು ಪ್ರದರ್ಶನ ಕಾಣಬೇಕಿತ್ತು. ಆದರೆ ಬೆಂಗಳೂರಿನಲ್ಲಿ ‘ರಾಜಕುಮಾರ’ ಚಿತ್ರವೇ ಮೈಲುಗೈ ಸಾಧಿಸಿದ್ದು ಪ್ರತಿದಿನ 35 ಕ್ಕೂ ಹೆಚ್ಚು ಶೋ ಪ್ರದರ್ಶನ ಪಡೆಯುತ್ತಿದೆ. ‘ಬಾಹುಬಲಿ-2’ ಚಿತ್ರ ಕೇವಲ 21 ಶೋಗಳ ಪ್ರದರ್ಶನ ಪಡೆಯುತ್ತಿದೆ ಎಂಬುದು ಮೂಲಗಳಿಂದ ತಿಳಿದಿದೆ.

‘ರಾಜಕುಮಾರ’ ಚಿತ್ರ ಬೆಂಗಳೂರಿನಲ್ಲಿ ‘ಬಾಹುಬಲಿ-2’ ಚಿತ್ರಕ್ಕಿಂತ ಹೆಚ್ಚು ಶೋಗಳ ಪ್ರದರ್ಶನ ಕಾಣುತ್ತಿರುವ ಬಗ್ಗೆ ತಿಳಿದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಫುಲ್ ಹ್ಯಾಪಿ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ, ‘ಜನರು ನಿರೀಕ್ಷೆ ಮಾಡುವ ಉತ್ತಮ ಗುಣಮಟ್ಟದ ಕನ್ನಡ ಸಿನಿಮಾ ‘ರಾಜಕುಮಾರ’. ಬಿಡುಗಡೆಗೂ ಮುನ್ನ ಚಿತ್ರದ ಯಶಸ್ಸಿನ ಬಗ್ಗೆ ನಮಗೆ ವಿಶ್ವಾಸವಿತ್ತು. ಕಾರಣ ಕೌಟುಂಬಿಕ ಮೌಲ್ಯಗಳನ್ನು ಈ ಚಿತ್ರ ಒಳಗೊಂಡಿತ್ತು’ ಎಂದಿದ್ದಾರೆ.

‘ರಾಜಕುಮಾರ’ ಚಿತ್ರ ಇಂದಿಗೆ 84 ದಿನಗಳನ್ನು ಪೂರೈಸಿದ್ದು, ನೂರು ದಿನಗಳತ್ತ ದಾಪುಗಾಲಿಡುತ್ತಿದೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೆ ಪ್ರಿಯಾ ಆನಂದ್ ಜೊತೆಯಾಗಿ ನಟಿಸಿದ್ದು, ವಿಜಯ್ ಕಿರಗಂದೂರ್ ಚಿತ್ರ ನಿರ್ಮಾಣ ಮಾಡಿದ್ದಾರೆ.

Courtesy: filmibeat
Facebook Auto Publish Powered By : XYZScripts.com