ರಾಜಕೀಯಕ್ಕೆ ಬರುವುದರ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?.. ಇಲ್ಲಿ ಓದಿ

ನನ್ನಂಥವನನ್ನೇ ಬೆಳೆಸಿದ್ದೀರಾ. ಮರ ಬೆಳೆಸೋಕ್ಕಾಗಲ್ವಾ? ಇದು ರಾಕಿಂಗ್ ಸ್ಟಾರ್ ಯಶ್ ಅವರು ಯುವ ಜನರಿಗೆ ಹೇಳಿ ಮಾತು. ಅವರು ಇಂದು ಇಲ್ಲಿಯ ಪ್ರತಿಷ್ಠಿತ ಬಿಎಲ್​ಡಿಇ ಸಂಸ್ಥೆ ಪ್ರಾರಂಭಿಸಿರುವ ಕೋಟಿ ವೃಕ್ಷ ಆಂದೋಲನದಲ್ಲಿ ರಾಯಭಾರಿಯಾಗಿ ಆಗಮಿಸಿ ಮಾತನಾಡಿದರು.

ಇದೇ ವೇಳೆ ಅವರು ಮಾತನಾಡಿ ಯುವಜನತೆಗೆ ಮರದ ಮಹತ್ವದ ಬಗ್ಗೆ ಅರಿವು ಮುಡಿಸಿದರು. “ನಾನು ರಾಜಕೀಯಕ್ಕೆ ಬರುವ ಬಗ್ಗೆ ಅನೇಕರು ಪ್ರಶ್ನಿಸುತ್ತಾರೆ. ರಾಜಕೀಯಕ್ಕೆ ಬರಲು ನನಗೆ ಆಸಕ್ತಿಯಿಲ್ಲ. ನಾನು ಜನರನ್ನು ಮೆಚ್ಚಿಸಲು ಮಾತ್ರ ಕೆರೆಯ ಹೂಳೆತ್ತುವ ಕಾಮಗಾರಿ ಸೇರಿದಂತೆ ನಾನಾ ಪರಿಸರ ಸಂಬಂಧಿ ಕೆಲಸಗಳನ್ನು ಮಾಡುತ್ತಿಲ್ಲ. ನನ್ನದೇನಿದ್ದರೂ ನೇರ ಮಾತು,” ಎಂದು ರಾಕಿಂಗ್ ಸ್ಟೈಲಿನಲ್ಲಿ ಯಶ್ ಹೇಳಿದರು.

Facebook Auto Publish Powered By : XYZScripts.com