ರಾಕ್ಲೈನ್ ವೆಂಕಟೇಶ್ ನಿರ್ದೇಶಕನಿಗೆ ಸಂಭಾವನೆ ಕೊಡಲ್ಲ ಹೋಗು ಅಂದಿದ್ದು ಯಾಕೆ… ಇಲ್ಲಿ ಓದಿ

ಕನ್ನಡ ಚಿತ್ರರಂಗದಲ್ಲಿ ಎಲ್ಲರ ವಿಶ್ವಾಸ ಉಳಿಸಿಕೊಂಡು ವ್ಯವಹಾರದಲ್ಲಿಯೂ ನೀಟ್ ಅಂತಲೇ ಹೆಸರು ಪಡೆದಿರುವವರು ರಾಕ್ಲೈನ್ ವೆಂಕಟೇಶ್. ಈಗ ಬಾಲಿವುಡ್ ಮಟ್ಟದ ಚಿತ್ರಗಳ ನಿರ್ಮಾಣದಲ್ಲಿಯೂ ಬ್ಯುಸಿಯಾಗಿರೋ ವೆಂಕಟೇಶ್ ಅವರ ಬಗ್ಗೆ ವ್ಯಾವಹಾರಿಕವಾಗಿ ಯಾರಿಗೂ ಯಾವ ತಕರಾರುಗಳೂ ಇರಲಿಕ್ಕಿಲ್ಲ. ಒಪ್ಪಿಕೊಂಡ ಸಂಭಾವನಮೆಯನ್ನು ಹೇಳಿದ ಸಮಯಕ್ಕೆ ಕೊಡೋದು ರಾಕ್ಲೈನ್ ವರ್ಕಿಂಗ್ ಸ್ಟೈಲ್. ಒಂದು ವೇಳೆ ಯಾರಾದರೂ ಪೇಮೆಂಟ್ ಪಡೆಯದೇ ಹೋಗಿದ್ದರೆ ಅವರ ಮನೆ ಬಾಗಿಲೆಗೇ ದುಡ್ಡು ಕಳಿಸ್ತಾರೆ ಅನ್ನೋ ಮಾತಿದೆ. ಇಂಥಾ ರಾಕ್ಲೈನ್ ವೆಂಕಟೇಶ್ ಬೃಹಸ್ಪತಿ ಚಿತ್ರದ ನಿರ್ದೇಶಕ ನಂದಕಿಶೋರ್ಗೆ ಒಂದು ರೂಪಾಯಿ ಸಂಭಾವನೇನೂ ಕೊಡಲ್ಲ ಹೋಗು ಅಂತ ಅಟ್ಟಿಸಿದ್ದಾರೆಂದರೆ ನಂಬಲು ತುಸು ಕಷ್ಟವಾದೀತು!

ರವಿಚಂದ್ರನ್ ಪುತ್ರ ನಟಿಸಿದ್ದ ಬೃಹಸ್ಪತಿ ಚಿತ್ರ ತೆರೆ ಕಂಡು ಮಾಯವಾಗಿ ಬಹಳ ಸಮಯ ಕಳೆದಿದೆ. ಈ ಚಿತ್ರಕ್ಕಾಗಿ ನಂದಕಿಶೋರ್ಗೆ ಇಪ್ಪತೈದು ಲಕ್ಷ ಸಂಭಾವನೆ ಕೊಡಲು ರಾಕ್ಲೈನ್ ಒಪ್ಪಿಕೊಂಡಿದ್ದರಂತೆ. ಆದರೆ ಚಿತ್ರ ಬಿಡುಗಡೆಯಾಗಿ, ಅದು ಥೇಟರುಗಳಿಂದ ಎತ್ತಂಗಡಿಯಾದರೂ ರಾಕ್ ಲೈನ್ ಸಂಭಾವನೆಯ ಬಗ್ಗೆ ಮಾತೇ ಆಡಿರಲಿಲ್ಲ. ಈ ಬಗ್ಗೆ ರಾಕ್ಲೈನ್ ಗಮನ ಸೆಳೆಯಲು ನಾನಾ ಕಸರತ್ತು ಮಾಡಿದ ನಂದಕಿಶೋರ್ ಸೋತಿದ್ದರು. ಕಡೆಗೂ ಅಳುಕುತ್ತಲೇ ರಾಕ್ಲೈನ್ ಅವರನ್ನು ಸಂಪರ್ಕಿಸಿದ ನಂದಕಿಶೋರ್ಗೆ ಆ ಕಡೆಯಿಂದ ಬಿಗ್ ಶಾಕ್ ಕಾದಿತ್ತು. ಯಾಕೆಂದರೆ ರಾಕ್ಲೈನ್ ಸಂಭಾವನೆಯಲ್ಲಿ ಒಂದು ರೂಪಾಯಿಯನ್ನೂ ಕೊಡೋದಿಲ್ಲ ಹೋಗು ಅಂತ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರಂತೆ!

ಹಾಗಾದರೆ ರಾಕ್ಲೈನ್ ಈ ಪಾಟಿ ರೊಚ್ಚಿಗೇಳುವಂಥಾ ಅದ್ಯಾವ ಕೆಲಸವನ್ನು ನಂದ ಕಿಶೋರ್ ಮಾಡಿದ್ದರು ಎಂಬ ಬಗ್ಗೆ ಗಾಂಧಿ ನಗರದ ತುಂಬಾ ರಂಗು ರಂಗಾದ ಕಥಾವಳಿಗಳು ಹರಿದಾಡುತ್ತಿವೆ. ನಂದ ಕಿಶೋರ್ ತಂತ್ರಜ್ಞರು, ಕಲಾವಿದರಿಂದ ಪರ್ಸೆಂಟೇಜ್ ಪಡೆದುಕೊಂಡರಾ? ಈ ವ್ಯವಹಾರ ಗೊತ್ತಾಗಿದ್ದರಿಂದಲೇ ರಾಕ್ಲೈನ್ ರೆಬೆಲ್ ಆದರಾ ಎಂಬೆಲ್ಲ ಪ್ರಶ್ನೆಗಳೂ ಕೂಡಾ ಚಾಲ್ತಿಯಲ್ಲಿವೆ.

ರಾಕ್ಲೈನ್ ಹೀಗೆ ಕೈಯೆತ್ತಲು ಚಿತ್ರದ ಸೋಲು ಕಾರಣ ಅಂದುಕೊಳ್ಳುವಂತೆಯೂ ಇಲ್ಲ. ಯಾಕೆಂದರೆ ಚಿತ್ರವೊಂದು ನಿರೀಕ್ಷಿತ ಗೆಲುವು ಕಾಣದೇ ಇದ್ದಾಗಲೂ ಒಪ್ಪಿಕೊಂಡ ಸಂಭಾವನೆಯನ್ನು ಹುಡುಕಿಕೊಂಡು ಹೋಗಿ ಕೊಟ್ಟ ಉದಾಹರಣೆಗಳು ರಾಕ್ಲೈನ್ ವೃತ್ತಿ ಬದುಕಿನಲ್ಲಿವೆ. ಈ ನಿಟ್ಟಿನಲ್ಲಿ ನೋಡ ಹೋದರೆ ಸಂಭಾವನೆ ಕೊಡದಿರಲು ಖಂಡಿತಾ ಬೃಹಸ್ಪತಿಯ ಸೋಲು ಕಾರಣವಾಗಿರಲಾರದು. ಹಾಗಾದರೆ ನಂದ ಕಿಶೋರ್ ಮಾಡಿಕೊಂಡಿರೋ ಲಫಡಾ ಏನೆಂಬ ಬಗ್ಗೆ ಗಾಂಧಿನಗರದಲ್ಲೊಂದು ಕುತೂಹಲ ಇದ್ದೇ ಇದೆ!

Facebook Auto Publish Powered By : XYZScripts.com