ರಾಕಿಂಗ್ ಸ್ಟಾರ್ ಯಶ್ ಜೊತೆ ಕಾಮಿಡಿ ಕಿಲಾಡಿ ನಯನಾ!

ಸಿನಿಮಾ ಡೆಸ್ಕ್ :ಜೀ ವಾಹಿನಿಯ ಸಖತ್ ಫೇಮಸ್ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ನ ನಯನ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ಡಿಮ್ಯಾಂಡ್ ಶುರುವಾಗಿದೆ. ಅಂದಹಾಗೆ ಹೌದು ಹುಬ್ಬಳ್ಳಿ ಬೆಡಗಿ ನಯನಾಗೆ ಜಗ್ಗೇಶ್ ಅವರು ತಮ್ಮ ಮಗನ ಸಿನಿಮಾದಲ್ಲಿ ನಟಿಸಲು ಚಾನ್ಸ್ ನೀಡ್ತಾ ಇರೋ ವಿಷ್ಯ ನಿಮಗೆಲ್ಲಾ ಗೊತ್ತಿದೆ.

ಆದರೆ ಇದೀಗ ಮತ್ತೊಂದು ಸುದ್ದಿ ಇದೆ ಅದೇನಪ್ಪ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ನಯನಾ ಒಂದು ಪಾತ್ರವನ್ನು ಮಾಡಲಿದ್ದಾರೆ. ಆದರೆ ಆ ಪಾತ್ರ ಏನೆಂಬುದು ಯಾರಿಗೂ ಕೂಡ ಗೊತ್ತಿಲ್ಲ. ಚಿತ್ರತಂಡ ಕೂಡ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಡಲಿಲ್ಲ.

ಅಲ್ಲದೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ‘ಲೀಡರ್’ ಸಿನಿಮಾದಲ್ಲಿ ನಟಿಸಲು ನಯನಾಗೆ ಆಫರ್ ಬಂದಿರುವುದು ನಿಮಗೆ ಗೊತ್ತಿರುವ ವಿಷಯ.

ಅದೇನೆ ಇರಲಿ ಪ್ರತಿಭಾವಂತೆ ನಯನಾ ಸ್ಯಾಂಡಲ್ ವುಡ್ ನಲ್ಲಿ ಯಾವ ಮಟ್ಟಿಹೆ ಹವಾ ಮಾಡ್ತಾರೆ ಎಂಬುದು ಸದ್ಯಕ್ಕಿರುವ ಕುತೂಹಲ.

Courtesy: Kannada News Now

Facebook Auto Publish Powered By : XYZScripts.com