ರಾಕಿಂಗ್ ಸ್ಟಾರ್ ಭಯ ಪಡೋದು ಈ ಒಬ್ಬ ವ್ಯಕ್ತಿಗೆ ಮಾತ್ರ

ಸ್ಯಾಂಡಲ್ ವುಡ್ ಮಾಸ್ಟರ್ ಪೀಸ್, ರಾಕಿಂಗ್ ಸ್ಟಾರ್ ಯಶ್ ಕನ್ನಡ ಇಂಡಸ್ಟ್ರಿಯ ‘ಗಜಕೇಸರಿ’. ತಾನಿಟ್ಟಿದ್ದೇ ಹೆಜ್ಜೆ, ತಾನೋಗಿದ್ದೇ ಮಾರ್ಗ ಎಂಬಂತೆ ಯಾರೇ ಏನೇ ಕಾಲೆಳೆದ್ರು ಯೋಶೋಮಾರ್ಗದಲ್ಲಿ ಯಶಸ್ಸು ಕಾಣುತ್ತಿರುವ ನಟ.

ರೆಬಲ್ ಸ್ಟಾರ್ ಅಂಬರೀಶ್ ಅಂದ್ರೆ ಯಶ್ ಗೆ ಅಪಾರ ಗೌರವ. ಅವರನ್ನ ಬಿಟ್ಟರೆ ಯಶ್ ಯಾರಿಗೂ ಭಯ ಪಡಲ್ಲ ಎಂಬುದು ಗೊತ್ತಿರೋ ವಿಚಾರ. ಹಾಗಿದ್ರೆ, ಯಶ್ ಮನೆಯಲ್ಲೂ ಹೀಗೆ ಇರ್ತಾರ ಎಂಬ ಕುತೂಹಲ ಕಾಡುವುದು ಸಹಜ.

ಈ ವಿಷ್ಯವನ್ನ ಸ್ವತಃ ರಾಧಿಕಾ ಪಂಡಿತ್ ಬಹಿರಂಗಪಡಿಸಿದ್ದಾರೆ. ಹೌದು, ಯಶ್ ಅವರಿಗೆ ರಾಧಿಕಾ ಕಂಡ್ರೆ ಭಯ ಇಲ್ಲ. ಯಶ್ ಅವರ ಅಮ್ಮ-ಅಪ್ಪನ್ನು ಕಂಡ್ರು ಭಯವಿಲ್ಲ. ತಂಗಿಯನ್ನ ಕಂಡ್ರು ಭಯವಿಲ್ಲ ಎಂದಿರುವ ರಾಧಿಕಾ, ತಮ್ಮ ಸೋದರಳಿಯನನ್ನ ಕಂಡ್ರೆ ಯಶ್ ಗೆ ಭಯ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಅಂದ್ಹಾಗೆ, ನಿನ್ನೆ (ಜನವರಿ 10) ಯಶ್ ಅವರ ಸೋರಳಿಯ (ತಂಗಿ ಮಗ) ಚಿರಾಗ್ ಗೆ ಜನುಮದಿನ. ಮನೆಯವರೆಲ್ಲ ಕೂಡಿ ಚಿರಾಗ್ ಹುಟ್ಟುಹಬ್ಬವನ್ನ ಆಚರಿಸಿದ್ದು, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ಯಶ್, ರಾಧಿಕಾ, ಯಶ್ ಕುಟುಂಬ ಭಾಗಿಯಾಗಿದೆ.

Facebook Auto Publish Powered By : XYZScripts.com