ರಶ್ಮಿಕಾ ಮಂದಣ್ಣ ವೃತ್ತ ಚಿತ್ರದಿಂದ ಹೊರ ಬರಲು ಅಸಲಿ ಕಾರಣ ಗೊತ್ತಾ?.. ಇಲ್ಲಿ ಓದಿ

ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿ ಇದ್ದಾರೆ ಇದಕ್ಕೆ ಕಾರಣ ಅವರು ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಮಾಡಿ ಕೊಂಡಿದ್ದಾರೆ ಹಾಗೂ ಗೀತ ಗೋವಿಂದಂನ ನಟನ ಜೊತೆಗೆ ಲಿಪ್ ಲಾಕ್ ನಲ್ಲಿ ಮಾಡಿದ್ದಾರೆ ಎಂಬ ಗುಸುಗುಸು.

ಇದಕ್ಕೆ ಪುಷ್ಟಿ ಎಂಬಂತೆ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಅವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿರುವ ಗೌತಮ್ ಅಯ್ಯರ್ ನಿರ್ದೇಶನದ ‘ವೃತ್ರ’ ಚಿತ್ರದಿಂದ ಹೊರನಡೆದಿದ್ದರು ಇದು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಿತ್ತು. ಈ ನಡುವೆ ತೆಲುಗು ಸಿನಿಮಾಗಳಲ್ಲಿ ಬಿಜಿಯಿರುವ ಕಾರಣಕ್ಕೆ ‘ವೃತ್ರ’ ಚಿತ್ರದಿಂದ ರಶ್ಮಿಕಾ ಹೊರಗೆ ಬಂದಿದ್ದಾರೆ ಎನ್ನಲಾಗಿತ್ತು. ಆದ್ರೆ, ಅಸಲಿ ಕಾರಣ ಬೇರೆಯೇ ಇದೆ.

”ವೃತ್ರ ಮಹಿಳಾ ಪ್ರಧಾನ ಸಿನಿಮಾ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುವ ಮಟ್ಟಕ್ಕೆ ನಾನಿನ್ನೂ ಬೆಳೆದಿಲ್ಲ. ನನ್ನಿಂದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ತೊಂದರೆ ಆಗಬಾರದು. ಹೀಗಾಗಿ ಚಿತ್ರದಿಂದ ಹೊರಗೆ ಬಂದಿದ್ದೇನೆ” ಎಂದು ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.

Facebook Auto Publish Powered By : XYZScripts.com