ರಶ್ಮಿಕಾ ಬಿಟ್ಟು ಹೋದ ವೃತ್ತ ಚಿತ್ರಕ್ಕೆ ಹೊಸ ನಾಯಕಿ ಯಾರು ಗೊತ್ತಾ ಇಲ್ಲಿ ಓದಿ

ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಈ ಕಾರಣದಿಂದ ಅವರು ‘ವೃತ್ರ’ ಸಿನಿಮಾವನ್ನು ಕೈ ಬಿಟ್ಟಿದ್ದರು. ಆದರೆ, ಇದೀಗ ರಶ್ಮಿಕಾ ಜಾಗಕ್ಕೆ ಹೊಸ ನಾಯಕಿಯ ಆಯ್ಕೆ ಆಗಿದೆ.

ನಟಿ ನಿತ್ಯಾ ಶ್ರೀ ‘ವೃತ್ರ’ ಸಿನಿಮಾದ ನಾಯಕಿ ಆಗಿದ್ದಾರೆ. ಇದು ಅವರ ಎರಡನೇ ಕನ್ನಡ ಸಿನಿಮಾವಾಗಿದೆ. ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ತುಂಬ ಪ್ರಾಮುಖ್ಯತೆ ಇದ್ದು, ನಿತ್ಯಾ ಶ್ರೀ ಈ ಪಾತ್ರಕ್ಕೆ ಸೂಕ್ತ ಎಂದು ಚಿತ್ರತಂಡ ನಿರ್ಧಾರ ಮಾಡಿದೆ.

ನಿತ್ಯಾ ಶ್ರೀ ಈ ಹಿಂದೆ ಮಣಿರತ್ನಂ ನಿರ್ದೇಶನದ ಒಂದು ಚಿತ್ರಗಳಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು. ನಟನೆಯಲ್ಲಿ ಅನುಭವ ಇರುವ ಅವರಿಗೆ ಈಗ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ಗೌತಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾವಾಗಿದೆ. ರಕ್ಷಿತ್ ಶೆಟ್ಟಿ ಅವರ ಬ್ಯಾನರ್ ನಲ್ಲಿ ಗೌತಮ್ ಕೆಲಸ ಮಾಡುತ್ತಿದ್ದರು.

Facebook Auto Publish Powered By : XYZScripts.com