ರಣ ವಿಕ್ರಮ ನಿರ್ದೇಶಕರ ಜೊತೆ ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾದ ಹೆಸರೇನು ಗೊತ್ತಾ?.. ಇಲ್ಲಿ ಓದಿ

‘ಅಂಜನೀಪುತ್ರ’ ಸಿನಿಮಾದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾ ಸೆಟ್ಟೇರಿದೆ. ನಿನ್ನೆ (ಸೋಮವಾರ) ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಬರುತ್ತಿರುವ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ.

ಅಂದಹಾಗೆ, ನಿನ್ನೆ ಸೆಟ್ಟೇರಿದ ಈ ಹೊಸ ಸಿನಿಮಾದ ಟೈಟಲ್ ಇನ್ನೂ ಬಹಿರಂಗವಾಗಿರಲಿಲ್ಲ. ಸಿನಿಮಾದ ಚಿತ್ರೀಕರಣ ಮಾರ್ಚ್ 8 ರಿಂದ ಶುರು ಆಗಲಿದೆ. ಇನ್ನೂ ಸಿನಿಮಾದ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರಕ್ಕೆ ಡಿ ಇಮ್ಮನ್ ಮ್ಯೂಸಿಕ್ ಮಾಡುತ್ತಿದ್ದಾರೆ. ‘ರಣವಿಕ್ರಮ’ ನಂತರ ಮತ್ತೆ ಪವನ್ ಒಡೆಯರ್ ಹಾಗೂ ಪುನೀತ್ ರಾಜ್ ಕುಮಾರ್ ಜೋಡಿ ಒಂದಾಗಿದ್ದು ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಜೊತೆಗೆ ‘ಅಂಜನೀಪುತ್ರ’ ನಂತರ ಅಪ್ಪು ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಗೊಂದಲ ನಿವಾರಣೆ ಆಗಿದೆ.

ಈ ಚಿತ್ರಕ್ಕೆ ಈಗ ‘ಪಂಜು’ ಎನ್ನುವ ಟೈಟಲ್ ಫಿಕ್ಸ್ ಆಗಿದೆ ಎನ್ನುವ ಸುದ್ದಿ ಇದೆ. ಇದೊಂದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ. ಚಿತ್ರಕ್ಕೆ ‘ಪಂಜು’ ಎನ್ನುವ ಪಂಚಿಂಗ್ ಹೆಸರನ್ನು ಇಡಲಾಗಿದೆಯಂತೆ.

Facebook Auto Publish Powered By : XYZScripts.com