ರಚಿತಾ ರಾಮ್ ಅವರ ನಿಜವಾದ ಹೆಸರೇನು ಗೊತ್ತಾ?.. ಇಲ್ಲಿ ಓದಿ

ನಟಿ ರಚಿತಾ ರಾಮ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಚಿತಾ ಬರ್ತ್ ಡೇ ವಿಶೇಷವಾಗಿ ಅವರ ಬಗ್ಗೆ ಅನೇಕರಿಗೆ ತಿಳಿಯದ ಒಂದು ಕುತೂಹಲಕಾರಿ ವಿಷಯ ನಿಮ್ಮ ಮುಂದೆ ಈಡುತ್ತಿದ್ದೇವೆ.

ರಚಿತಾ ರಾಮ್ ಮೊದಲ ಹೆಸರು ಬಿಂದ್ಯಾ ರಾಮ್ ಆಗಿತ್ತು. ‘ಬುಲ್ ಬುಲ್’ ಸಿನಿಮಾ ಮಾಡುವ ಸಮಯದಲ್ಲಿ ಅವರ ಹೆಸರು ಬಿಂದ್ಯಾಯಿಂದ ರಚಿತಾ ರಾಮ್ ಆಗಿ ಬದಲಾಯಿತು. ಬಿಂದ್ಯಾ ಎಂಬ ಹೆಸರು ಉತ್ತರ ಭಾರತದ ಶೈಲಿಯಲ್ಲಿ ಇದೇ ಎನ್ನುವ ಕಾರಣಕ್ಕೆ ಆ ಹೆಸರನ್ನು ಅವರು ಬದಲಾಹಿಸಿಕೊಂಡರು. ವಿಶೇಷ ಅಂದರೆ, ರಚಿತಾ ರಾಮ್ ಎಂಬ ಹೆಸರನ್ನು ಸೂಚಿಸಿದ್ದು, ನಿರ್ದೇಶಕ ದಿನಕರ್ ತೂಗುದೀಪ ಹಾಗೂ ಗೀತರಚನೆಕಾರ ಕವಿರಾಜ್. ‘ಬುಲ್ ಬುಲ್’ ಸಿನಿಮಾದ ದರ್ಶನ್ ಅವರ ಬ್ಯಾನರ್ ನಲ್ಲಿ ನಿರ್ಮಾಣ ಆಗಿತ್ತು. ಈ ಚಿತ್ರದ ನಾಯಕಿ ಪಾತ್ರಕ್ಕೆ ರಚಿತಾ ಅವರನ್ನು ಆಯ್ಕೆ ಮಾಡಲಾಗಿತ್ತು. ನಂತರ ಅವರ ಹೆಸರನ್ನು ರಚಿತಾ ರಾಮ್ ಆಗಿ ಬದಲಾಹಿಸಿದ್ದರು.

ಈ ರೀತಿ ‘ಬುಲ್ ಬುಲ್’ ಸಿನಿಮಾದಿಂದ ರಚಿತಾ ರಾಮ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಹುಡುಗಿ ಇಂದು ಸ್ಟಾರ್ ನಟಿಯಾಗಿ ಬೆಳೆದು ನಿಂತಿದ್ದಾರೆ.

source: filmibeat.com

Facebook Auto Publish Powered By : XYZScripts.com