‘ರಂಗಿತರಂಗ’ ಹೀರೋಗೆ ಸಿಕ್ತು ಸ್ಪೆಷಲ್ ಗಿಫ್ಟ್

‘ರಂಗಿತರಂಗ’ ಚಿತ್ರದ ಮೂಲಕ ನಿರೂಪ್ ಭಂಡಾರಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಕರ್ನಾಟಕದಲ್ಲಂತೂ ನಿರೂಪ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಜನರು ತಮ್ಮ ಬಗ್ಗೆ ಯಾವ ರೀತಿ ಅಭಿಮಾನ ಇಟ್ಟಿದ್ದಾರೆ ಅನ್ನೋದನ್ನು ತಿಳಿದುಕೊಳ್ಳುವ ಅವಕಾಶ ಖುದ್ದು ನಿರೂಪ್ ಗೆ ಒದಗಿ ಬಂದಿತ್ತು.

ಇತ್ತೀಚೆಗೆ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು ಫೆಸ್ಟಿವಲ್ ನಲ್ಲಿ ನಿರೂಪ್ ಪಾಲ್ಗೊಂಡಿದ್ದರು. ಈ ವೇಳೆ ಕಾಲೇಜಿನ ಸಿಬ್ಬಂದಿಯೊಬ್ಬ ಅವರಿಗೆ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.

ಆತ ವಿಕಲಚೇತನ, ನಿರೂಪ್ ಗೋಸ್ಕರ ‘ರಂಗಿತರಂಗ’ ದ ಚಿತ್ರವೊಂದನ್ನು ಬಿಡಿಸಿದ್ದಾನೆ. ಈ ವಿಷಯವನ್ನು ಖುದ್ದು ನಿರೂಪ್ ಭಂಡಾರಿ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿ ತಮ್ಮ ಮೇಲಿಟ್ಟಿರುವ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.

Courtesy: Kannada Duniya

Facebook Auto Publish Powered By : XYZScripts.com