ಯೂಟ್ಯೂಬಿನಲ್ಲಿ ಧೂಳೆಬ್ಬಿಸುತ್ತಿರುವ ಗ್ರಾಮಾಯಣ ಚಿತ್ರದ ಟೀಸರ್, ಇಲ್ಲಿ ನೋಡಿ

ಸಿನಿಮಾಡೆಸ್ಕ್: ವಿನಯ್ ರಾಜಕುಮಾರ್ ನಟಿಸುತ್ತಿರುವ ‘ಗ್ರಾಮಾಯಣ’ ಚಿತ್ರದ ಟೀಸರ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ .

ಚಿತ್ರದ ಟೀಸರ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ, ಮೊದಲ ನೋಟದಲ್ಲೇ ಈ ಸಿನಿಮಾ ಕಲಾಭಿಮಾನಿಗಳ ಹೃದಯ ಗೆದ್ದಿದೆ.

ಟೀಸರ್‍ ನಲ್ಲಿ ಡಾ. ರಾಜಕುಮಾರ್ ಅವರ ಧ್ವನಿಯಲ್ಲಿ ಗಾಜನೂರಿನ ಪರಿಚಯವಿದೆ. ಅಣ್ಣಾವ್ರು, ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಪರಿಚಯಿಸಿರುವ ವಿಡಿಯೋವನ್ನು ತೋರಿಸಲಾಗಿದ್ದು, ಬಳಿಕ ಗ್ರಾಮಾಯಣ ಚಿತ್ರದ ತೆರೆದುಕೊಳ್ಳುತ್ತದೆ.

ಗ್ರಾಮಾಯಣ ಚಿತ್ರವನ್ನು ದೇವನೂರು ಚಂದ್ರು ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ವಿನಯ್ ರಾಜಕುಮಾರ್​, ಅಮೃತಾ ಅಯ್ಯರ್ , ಸಂಪತ್ ಮೈತ್ರಿಯಾ, ಅಪರ್ಣಾ, ಸೀತಾ ಕೋಟೆ, ಶ್ರೀನಿವಾಸ್ ಪ್ರಭು, ಮಂಜುನಾಥ್ ಹೆಗಡೆ ಸೇರಿದಂತೆ ಮುಂತಾದವರು ನಟನೆ ಮಾಡುತ್ತಿದ್ದು,ಎನ್​​.ಎಲ್​.ಎನ್ ಮೂರ್ತಿ ಬಂಡವಾಳ ಹೂಡಿದ್ದಾರೆ.

Facebook Auto Publish Powered By : XYZScripts.com