‘ಯುವರಾಜ’ ನಿಖಿಲ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಶುಭಾಶಯ

 

ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ, ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರ್ ಗೆ ಇಂದು (ಜನವರಿ 22) ಜನುಮದಿನ ಸಂಭ್ರಮ. ‘ಜಾಗ್ವಾರ್’ ನಟನ ಹುಟ್ಟುಹಬ್ಬವನ್ನ ನಿಖಿಲ್ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ.

ರಾಜ್ಯದ ಹಲವು ಕಡೆಯಿಂದ ನಿಖಿಲ್ ಅವರ ಅಭಿಮಾನಿಗಳು ಬೆಂಗಳೂರಿನ ನಿವಾಸದ ಬಳಿ ಬಂದು, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ‘ಕುರುಕ್ಷೇತ್ರ’ ಚಿತ್ರದ ನಿರ್ಮಾಪಕ, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಕೂಡ ನಿಖಿಲ್ ಕುಮಾರ್ ಗೆ ಹುಟ್ಟುಹಬ್ಬ ಶುಭಕೋರಿದ್ದಾರೆ. ಇನ್ನು ನಿಖಿಲ್ ಬರ್ತಡೇ ವಿಶೇಷ ಅವರ ಅಭಿಮಾನಿಗಳು ಅನ್ನದಾನ, ರಕ್ತದಾನ ಕೂಡ ಹಮ್ಮಿಕೊಂಡಿದ್ದರು.

ಮೊದಲ ಸಿನಿಮಾ ‘ಜಾಗ್ವಾರ್’ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 50ನೇ ಚಿತ್ರ ‘ಕುರುಕ್ಷೇತ್ರ’ದಲ್ಲಿ ಅಭಿಮನ್ಯು ಪಾತ್ರವನ್ನ ನಿರ್ವಹಿಸಿದ್ದಾರೆ. ಈಗಾಗಲೇ ನಿಖಿಲ್ ಕುಮಾರ್ ಅವರ ಪೋಸ್ಟರ್ ಮತ್ತು ಟೀಸರ್ ಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈ ಸಿನಿಮಾಗಾಗಿ ನಿಖಿಲ್ ಫ್ಯಾನ್ಸ್ ಕಾಯ್ತಿದ್ದಾರೆ.

ಮತ್ತೊಂದೆಡೆ ಹರ್ಷ ನಿರ್ದೇಶನದಲ್ಲಿ ‘ಸೀತಾರಾಮ ಕಲ್ಯಾಣ’ ಎಂಬ ಹೊಸ ಚಿತ್ರವನ್ನ ಆರಂಭಿಸಿದ್ದಾರೆ. ನಿಖಿಲ್ ಗೆ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ತಮಿಳು ನಟ ಶರತ್ ಕುಮಾರ್, ಆದಿತ್ಯ ಮೆನನ್, ಸುಧಾರಾಣಿ, ಸಾಧುಕೋಕಿಲಾ, ಚಿಕ್ಕಣ್ಣ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

source: filmibeat.com

Facebook Auto Publish Powered By : XYZScripts.com