ಯುಟ್ಯೂಬ್ ನಲ್ಲಿ ಸಡ್ಡು ಮಾಡುತ್ತಿರುವ ವಿಕ್ಟರಿ 2 ಚಿತ್ರದ ಹಾಡನ್ನು ನೀವು ಒಮ್ಮೆ ನೋಡಿ

ಶರಣ್ ನಟನೆಯ ವಿಕ್ಟರಿ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಹಾಡುಗಳಂತೂ ಸಖತ್ ಕಮಾಲ್ ಮಾಡಿತ್ತು. ಈಗ ವಿಕ್ಟರಿ 2 ಸಿನಿಮಾ ಸದ್ದಿಲ್ಲದೇ ಬಿಡುಗಡೆಗೆ ಸಜ್ಜಾಗಿದ್ದು. ಸಿನಿಮಾದ ಹಾಡೊಂದು ಭರ್ಜರಿ ಸೌಂಡ್ ಮಾಡ್ತಿದೆ.

ಯೆಸ್, ಇತ್ತೀಚೆಗೆ ತೆರೆ ಕ0ಡ ಶರಣ್ ಅವರ ರ್ಯಾಂಬೋ 2 ಸಿನಿಮಾ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿತ್ತು. ಈ ಸಿನಿಮಾದ ಚುಟು ಚುಟು ಅಂತೈತಿ ಹಾಡು ಸಖತ್ ಸೌಂಡ್ ಮಾಡಿತ್ತು. ಅದೇ ತೆರನಾಗಿ ವಿಕ್ಟರಿ 2 ಸಿನಿಮಾದ ಕುಟ್ಟು ಕುಟ್ಟು ಎಂಬ ಹಾಡು ಎಲ್ಲರ ಗಮನ ಸೆಳೆದಿದೆ.

ಉತ್ತರ ಕರ್ನಾಟಕ ಶೈಲಿಯ ಈ ಹಾಡನ್ನು ಶಿವು ಬೆರ್ಗಿ ಬರೆದಿದ್ದು. ಶಮಿತಾ ಮಲ್ನಾಡ್ ದನಿ ನೀಡಿದ್ದಾರೆ. ಇನ್ನೂ ವಿಕ್ಟರಿ 2 ಸಿನಿಮಾ ನವೆಂಬರ್ 1 ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಚಿತ್ರದಲ್ಲಿ ಶರಣ್ ಜೊತೆ ಸಾಧುಕೋಕಿಲಾ ಹಾಗೂ ಆರ್ಮುಗಂ ರವಿಶಂಕರ್ ನಟಿಸಿದ್ದಾರೆ.

ಚಿತ್ರಕ್ಕೆ ತರುಣ್ ಸುಧೀರ್ ಅವರು ಕಥೆ ಬರೆದಿದ್ದು, . ಈ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಿಸಿದ್ದಾರೆ. ಹರಿ ಸಂತೋಷ್ ನಿರ್ದೇಶನ ಮಾಡಿದ್ದಾರೆ.

 

Facebook Auto Publish Powered By : XYZScripts.com