ಯಾವಾಗ ಸೆಟ್ಟೇರಲಿದೆ ಅಂಬರೀಷ್ ಮಗನ ಮೊದಲ ಚಿತ್ರ, ಚಿತ್ರದ ಹೆಸರೇನು… ಇಲ್ಲಿ ಓದಿ

‘ಅಂಬಿ ನಿಂಗ್ ವಯಸಾಯ್ತೋ’ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಜೊತೆ ಅಂಬರೀಶ್ ಅವರ ಮಗನ ಸಿನಿಮಾ ಬಗ್ಗೆ ಕೂಡ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಮಾರ್ಚ್ ತಿಂಗಳಲ್ಲಿ ಅಂಬಿ ಮಗನ ಮೊದಲ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಈಗಾಗಲೇ ಚಿತ್ರದ ನಿರ್ದೇಶಕ, ನಿರ್ಮಾಪಕರು ಅಂತಿಮವಾಗಿದ್ದು, ಕಲಾವಿದರ ಆಯ್ಕೆಯಲ್ಲಿದೆ ಚಿತ್ರತಂಡ.

ಈ ಮಧ್ಯೆ ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಚಿತ್ರಕ್ಕೆ ‘ಜಲೀಲಾ’ ಎಂದು ಟೈಟಲ್ ಇಡಲು ಚಿಂತಿಸಲಾಗಿತ್ತು. ಆದ್ರೀಗ, ‘ಜಲೀಲಾ’ ಟೈಟಲ್ ಬದಲು ‘ಅಮರ್’ ಎಂದು ಹೆಸರಿಡಲು ಯೋಜನೆ ಮಾಡಲಾಗುತ್ತಿದೆಯಂತೆ.

Facebook Auto Publish Powered By : XYZScripts.com