ಮೋಹಕ ತಾರೆ ರಮ್ಯಾ ಬಣ್ಣದ ಬದುಕಿಗೆ 14 ವರ್ಷಗಳ ಸಂಭ್ರಮ

ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ರಮ್ಯಾಗೆ ಇಂದು ವಿಶೇಷ ದಿನ. ಚಂದನವನದ ಬೆಳ್ಳಿ ಪರದೆ ಮೇಲೆ ನಾಯಕಿಯಾಗಿ ಹೆಜ್ಜೆ ಹಾಕಿದ ದಿನದಿಂದಲೂ ರಮ್ಯಾ ಅಂದು-ಇಂದು-ಎಂದೆಂದೂ ಅಭಿಮಾನಿಗಳ ಪಾಲಿಗೆ ‘ಕನಸಿನ ರಾಣಿ’.

ಆದ್ರೆ, ರಾಜಕೀಯದ ಕಡೆ ಒಲವು ಮೂಡಿಸಿಕೊಂಡ ರಮ್ಯಾ ಸದ್ಯ, ಬಣ್ಣದ ಲೋಕಕ್ಕೆ ತಾತ್ಕಾಲಿಕ ಗುಡ್ ಬೈ ಹೇಳಿದ್ದಾರೆ. ಅಂದ್ಹಾಗೆ ರಮ್ಯಾಗೆ ಈ ದಿನ ವಿಶೇಷ ಯಾಕಪ್ಪಾ ಅಂದ್ರೆ, ಇಂದಿಗೆ ಸ್ಯಾಂಡಲ್ ವುಡ್ ಕ್ವೀನ್ ಇಂಡಸ್ಟ್ರಿಗೆ ಬಂದು 14 ವರ್ಷ ಕಳೆದಿದೆ.

ಈ ವಿಶೇಷ ದಿನದಂದು ರಮ್ಯಾ ಅವರ ಜರ್ನಿ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ…..

ಚಿತ್ರಕೃಪೆ: ಅಪ್ಪು ಫ್ಯಾನ್ಸ್ ಕ್ಲಬ್

ನಟಿ ರಮ್ಯಾ ಕನ್ನಡ ಇಂಡಸ್ಟ್ರಿಗೆ ಬಂದು ಇಂದಿಗೆ 14 ವರ್ಷ ಪೂರೈಸಿದೆ. ಆಂದ್ರೆ, ರಮ್ಯಾ ಅಭಿನಯದ ಮೊದಲ ಚಿತ್ರಕ್ಕೂ 14 ವರ್ಷಗಳ ಸಂಭ್ರಮ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಎರಡನೇ ಸಿನಿಮಾ ‘ಅಭಿ’. ಈ ಚಿತ್ರದ ಮೂಲಕ ರಮ್ಯಾ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದರು.

‘ಅಭಿ’ ಚಿತ್ರದಲ್ಲಿ ಕಾಲೇಜ್ ಹುಡುಗಿ ಪಾತ್ರವನ್ನ ನಿರ್ವಹಿಸಿದ್ದ ರಮ್ಯಾ, ತಮ್ಮ ಮೊದಲ ಅಭಿನಯದಿಂದಲೇ ಕನ್ನಡ ಪ್ರೇಕ್ಷಕರನ್ನ ರಂಜಿಸಿದ್ದರು. ಡಾ.ರಾಜ್ ಕುಮಾರ್ ಅವರ ಬ್ಯಾನರ್ ನಿಂದ ಮೂಡಿಬಂದ ಸಿನಿಮಾದಲ್ಲಿ ತಮ್ಮ ಅದೃಷ್ಟ ಬದಲಿಸಿಕೊಂಡರು. ಡಾ.ರಾಜ್ ಪುತ್ರ ಪುನೀತ್ ಜೊತೆಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.

ನೋಡು ನೋಡುತ್ತಲೇ ಕನ್ನಡದ ಬಿಗ್ ಸ್ಟಾರ್ ಗಳ ನೆಚ್ಚಿನ ನಟಿಯಾಗಿಬಿಟ್ಟರು. ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಉಪೇಂದ್ರ, ಶ್ರೀಮುರುಳಿ, ಗಣೇಶ್, ಯಶ್ ಎಲ್ಲರೂ ಜೊತೆಯಲ್ಲೂ ಅಭಿನಯಿಸಿ ಯಶಸ್ಸು ಕಂಡರು.

ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳಿನಲ್ಲೂ ರಮ್ಯಾ ಮೋಡಿ ಮಾಡಿದ್ದಾರೆ. ಧನುಷ್ ಅಭಿನಯದ ‘ಪೊಲ್ಲದವನ್’, ಹಾಗೂ ವಿಶಾಲ್ ಅಭಿನಯದ ‘ಸಿಂಗಂ ಪುಲಿ’ ಚಿತ್ರಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ರಮ್ಯಾ ಇಲ್ಲಿಯವರೆಗೂ ಸುಮಾರು 39ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಎಕ್ಸ್ ಕ್ಯೂಸಮಿ’, ‘ರಂಗ ಎಸ್.ಎಸ್.ಎಲ್.ಸಿ’, ‘ಆಕಾಶ್’, ‘ಅಮೃತಧಾರೆ’, ‘ಗೌರಮ್ಮ’, ‘ಜ್ಯೂಲಿ’, ‘ಸೇವಂತಿ ಸೇವಂತಿ’, ‘ಜೊತೆ ಜೊತೆಯಲಿ’, ‘ಅರಸು’, ‘ಸಂಜು ವೆಡ್ಸ್ ಗೀತಾ’, ‘ಲಕ್ಕಿ’, ‘ಸಿದ್ಲಿಂಗು’ ಚಿತ್ರಗಳು ಸೇರಿದಂತೆ ಹಲವು ಸೂಪರ್ ಹಿಟ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

2016 ರಲ್ಲಿ ಬಿಡುಗಡೆಯಾದ ‘ನಾಗರಹಾವು’ ರಮ್ಯಾ ಅಭಿನಯದ ಕೊನೆಯ ಚಿತ್ರವಾಗಿದೆ. ಸದ್ಯ, ಮೋಹಕ ತಾರೆ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವ ಕಾರಣ ಸ್ಯಾಂಡಲ್ ವುಡ್ ನಿಂದ ದೂರುವಾಗಿದ್ದಾರೆ.

ರಮ್ಯಾ ಚಿತ್ರಜಗತ್ತಿನಲ್ಲಿ 14 ವರ್ಷ ಪೂರೈಸಿದ ಹಿನ್ನಲೆ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ತಾರೆಯರು ಶುಭಾಶಯ ಕೋರಿದ್ದಾರೆ. ಸೋ ನಮ್ಮ ಕಡೆಯಿಂದಲೂ ರಮ್ಯಾ ಅವರಿಗೆ ಶುಭಾಶಯಗಳು ತಿಳಿಸೋಣ.

Courtesy: Filmibeat

Facebook Auto Publish Powered By : XYZScripts.com