ಮೋದಿ ಕ್ರಮದ ವಿರುದ್ದ ಉಲ್ಟಾ ತಿರುಗಿದ ಕೆಆರ್‌ಕೆ

ಸದಾ ಕಾಂಟ್ರವರ್ಸಿಯಿಂದಲೇ ಸುದ್ದಿಯಲ್ಲಿರುವ ಕಮಾಲ್ ಆರ್ ಖಾನ್ (ಕೆ ಆರ್ ಕೆ), ಇದೀಗ ಪ್ರಧಾನಿ ನರೇಂದ್ರಮೋದಿಯವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಕಪ್ಪು ಹಣದ ವಿರುದ್ಧ ಕಠಿಣ ಕ್ರಮ ಕೈಗೊಂಡ ಪ್ರಧಾನಿ, ಮದ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ದಿಢೀರನೆ 500 ಮತ್ತು 1000 ರೂಪಾಯಿಗಳ ನೋಟನ್ನು ಬ್ಯಾನ್ ಮಾಡಿ, ಕಪ್ಪು ಹಣದ ವಿರುದ್ದ ಸಮರ ಸಾರಿದ್ದರು. ಮೋದಿ ನಡೆಯಿಂದಲೇ ಜನತೆ ತೀವ್ರ ಸಂಕಷ್ಟ ಎದುರಿಸಿದರೂ, ಪ್ರಧಾನಿ ನಡೆಗೆ ಭಾರಿ ಬೆಂಬಲ ವ್ಯಕ್ತವಾಗಿದೆ.
ಈ ನಡುವೆ ಮೊದಲಿಗೆ ಕಪ್ಪು ಹಣದ ವಿರುದ್ದದ ಪ್ರಧಾನಿ ಸರ್ಜಿಕಲ್ ಸ್ಟ್ರೈಕ್ ಗೆ ಬೆಂಬಲ ಸೂಚಿಸಿದ್ದ ಕೆಆರ್ ಕೆ, ಇದೀಗ ಉಲ್ಟಾ ತಿರುಗಿದ್ದಾರೆ. ಮೊದಲಿಗೆ ಪ್ರಧಾನಿ ಬೆನ್ನತಟ್ಟಿದ್ದ ಕೆಆರ್ ಕೆ, ಇದೀಗ ಮೋದಿ ನಡೆಯಿಂದ ಬಡವರ್ಗದ ಜನತೆ ಭಾರಿ ತೊಂದರೆಗೆ ಸಿಲುಕಿದ್ದು, ಬಡವರ ಶಾಪದಿಂದ ಮೋದಿ ನಿಜವಾಗಿಯೂ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಇಷ್ಟಕ್ಕೆ ತಮ್ಮ ಟ್ವೀಟರ್ ಪುರಾಣವನ್ನು ನಿಲ್ಲಿಸಿದ ಕೆಆರ್ ಕೆ, 500 ಮತ್ತು 1000 ನೋಟ್ ಗಳನ್ನು ಬ್ಯಾನ್ ಮಾಡಿರುವ ಕ್ರಮ ಒಳ್ಳೆಯದೆ. ಆದರೆ ಇದು ಮೋದಿ ಅವರಿಗೆ ಭಾರಿ ಹೊಡೆತ ನೀಡಲಿದ್ದು, ರಾಜಕೀಯ ಜೀವನವನ್ನೇ ಮುಗಿಸಲಿದೆ ಎಂದಿದ್ದಾರೆ.
Courtesy: Balkani News

Facebook Auto Publish Powered By : XYZScripts.com