ಮೊದಲ ಚಿತ್ರದಲ್ಲೇ ಪುನೀತ್‍ಗೆ ಹೀರೊಯಿನ್ ಆಗಿ ನಟಿಸುತ್ತಿರುವುದು ದೊಡ್ಡ ಅದೃಷ್ಟ: ತೆಲುಗು ಬೆಡಗಿ ಪ್ರಿಯಾಂಕಾ

ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿರುವ ನನ್ನ ಅದೃಷ್ಟ ಎಂದು ತೆಲುಗು ನಟಿ ಪ್ರಿಯಾಂಕಾ ಜವಾಲ್ಕರ್ ಹೇಳಿದ್ದಾರೆ.

ಪವನ್ ಒಡೆಯರ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ಪುನೀತ್ ರಾಜಕುಮಾರ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಟ್ಯಾಕ್ಸಿವಾಲಾ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕಾ ಆಯ್ಕೆಯಾಗಿದ್ದರು. ಇನ್ನು ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಅವರು ಸಿಟಿ ಎಕ್ಸ್ ಪ್ರೆಸ್ ಜತೆ ತಮ್ಮ ಅನುಭವವನ್ನು ಹಂಚಿಕೊಂಡರು.

ಸ್ಯಾಂಡಲ್ವುಡ್ ನಲ್ಲಿ ಇದು ನನ್ನ ಮೊದಲನೇ ಚಿತ್ರ. ನನ್ನ ಪಾದಾರ್ಪಣೆ ಚಿತ್ರದಲ್ಲೇ ಪುನೀತ್ ರಂತಾ ಖ್ಯಾತ ನಟನ ಜೋತೆ ಅಭಿನಯಿಸಲು ಅವಕಾಶ ಸಿಕ್ಕಿರುವುದು ಖುಷಿಯ ವಿಚಾರ. ಇನ್ನು ಪವನ್ ಒಡೆಯರ್ ಅವರ ಚಿತ್ರಕಥೆ ನನಗೆ ತುಂಬಾ ಇಷ್ಟವಾಗಿತ್ತು. ಅದರಿಂದಾಗಿಯೇ ನಾನು ಈ ಚಿತ್ರವನ್ನು ಒಪ್ಪಿಕೊಂಡೆ ಎಂದರು.

ಮಹಾರಾಷ್ಟ್ರದ ಅನಂತಪುರದಲ್ಲಿ ಪ್ರಿಯಾಂಕಾ ಜನಿಸಿದ್ದು, ಸಾಫ್ಟ್ ವೇರ್ ಎಂಜಿನೀಯರ್ ಆಗಿರುವ ಪ್ರಿಯಾಂಕಾ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಕೂಡ ಕಲಿತಿದ್ದಾರೆ. ರಾಹುಲ್ ಸಂಕೀರ್ತನ್ ನಿರ್ದೇಶನದ ಟ್ಯಾಕ್ಸಿವಾಲಾದಲ್ಲಿ ಪ್ರಿಯಾಂಕಾ ನಟೆಸಿದ್ದು, ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

Facebook Auto Publish Powered By : XYZScripts.com