ಮೊದಲ ವಾರ ಮಂಗಳೂರು ಹುಡುಗಿ ರಕ್ಷಿತಾ ಔಟ್

ಬಿಗ್​ಬಾಸ್​ ಸೀಸನ್​ 6 ಆರಂಭ ವಾಗಿದೆ. ಮನೆಯಲ್ಲಿ 18 ಮಂದಿ ಸ್ಪರ್ಧಿಗಳು ಈಗಾಗಲೇ ಬಿಗ್​ಬಾಸ್​ ಮನೆಯೊಳಗೆ ಹೋಗಿದ್ದೂ, ಅದಾಗಲೇ ಟಾಸ್ಕ್​​, ಮಾತು, ಯುದ್ಧ, ಸಣ್ಣದಾದ ಜಗಳ, ಅಣಕ ಆರಂಭವಾಗಿದೆ. ಇನ್ನು ಈ ಬಾರಿ ಮನೆಯ ಸ್ಪೆಷಾಲಿಟಿ ಅಂದ್ರೆ ಈ ಸಲ ಕಾಮನ್​ ಪೀಪಲ್ಸ್​ ಹೆಚ್ಚಾಗಿದ್ದೂ, ಸೆಲೆಬ್ರಿಟಿ ವರ್ಸಸ್​ ಕಾಮನ್​ ಪೀಪಲ್​ ಮಾತು ಸ್ವ್ಲಪ ತಣ್ಣಗಾಗಿದೆ. ಒಳಗಡೆಯಿಂದ ಅರಮನೆ ಒಳಗಡೆ ಹೋದರೆ ಸೆರೆಮನೆ ಎಂಬ ಟೈಟಲ್​ಗೆ ಪಕ್ಕಾ ಮ್ಯಾಚ್​ ಆಗುವ ಬಿಗ್​ಬಾಸ್​ ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್​ ಆಗಿ ಹೊರ ಬರುತ್ತಿದ್ದಾರೆ.

ಈ ವಾರ ಮಂಗಳೂರಿನ ಹುಡುಗಿ ರಕ್ಷಿತಾ ರೈ ಹೊರ ಬರುತ್ತಿದ್ದಾರೆ. ಕ್ರಿಕೆಟ್​ ಫೀಲ್ಡ್​ನಿಂದ ಗುರುತಿಸಿಕೊಂಡಿದ್ದ ಹಳ್ಳಿ ಹುಡುಗಿ ರಕ್ಷಿತಾ ಕ್ರಿಕೆಟ್ ತಬೇತಿ ಪಡೆದುಕೊಳ್ಳುತ್ತಿದ್ದರು. ಕೆಲ ಕ್ಲಬ್​ಗಳಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದ ರಕ್ಷಿತಾ ತಮದೆ ತಾಯಿಯನ್ನು ಬಿಟ್ಟು ಸುಮಾರು 8 ವರ್ಷಗಳೇ ಕಳೆದಿದದ್ಯಂತೆ.

ಅಲ್ಲದೇ ತನಗೆ ಕ್ರಿಕೆಟ್​ನಲ್ಲಿ ಆಸಕ್ತಿ ಇರುವುದಾಗಿ ಹೇಳಿಕೊಂಡು ಮನೆಯಿಂದ ಹೊರ ಬಂದಿದ್ದರು. ಬಿಗ್​ಬಾಸ್​ ಈ ಬಾರಿ ನನ್ನನ್ನು ಸ್ಪರ್ಧಿಯಾಗಿ ಆಯ್ಕೆ ಮಾಡಿಕೊಂಡಿದ್ದೂ ನಿಜಕ್ಕೂ ಖುಷಿ ಎಂದಿದ್ದ ರಕ್ಷಿತಾ ರನ್ನು ಬಿಗ್​ಬಾಸ್​ ಮನೆಯ ಸದಸ್ಯರು ನಾಮಿನೇಟ್​ ಮಾಡಿದ್ದರು. ಜನರ ಓಟಿನ ಪ್ರಕಾರ ರಕ್ಷಿತಾ ಸದ್ಯ ಬಿಗ್​ಬಾಸ್​ ಮನೆಯಿಂದ ಮೊದಲ ವಾರವೇ ಹೊರ ನಡೆದಿದ್ದಾರೆ. ಇನ್ನು ಬಿಗ್​ಬಾಸ್​ ಮನೆಯ 18 ಜನ ಸದಸ್ಯರಲ್ಲಿ ಉಳಿದವರು 17 ಮಂದಿ.

Facebook Auto Publish Powered By : XYZScripts.com