ಮೂವರು ವಿಲನ್ ಗಳನ್ನು ಎದುರಿಸಲಿರುವ ದರ್ಶನ್

ಟಗರಿನಲ್ಲಿ ನಟ ಧನಂಜಯ್ ಅವರ ವಿಲನ್ ಪಾತ್ರವನ್ನು ನೋಡಲಿಚ್ಛಿಸುವ ಪ್ರೇಕ್ಷಕರು ಇತ್ತ ಸಿನಿಮಾ ನಿರ್ಮಾಪಕರು ಮತ್ತು ನಿರ್ದೇಶಕರು ಗಮನವನ್ನು ವಿಲನ್ ಮಾತ್ರದ ಮೂಲಕ ಧನಂಜಯ್ ಹೆಚ್ಚು ಆಕರ್ಷಿಸಿದ್ದಾರೆ. ಟಗರು ಚಿತ್ರದಲ್ಲಿ ಡಾಲಿ ಪಾತ್ರವನ್ನು ಮಾಡಿರುವ ಧನಂಜಯ್ ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ.ಸುರೇಶ್ ಅವರ ಗಮನ ಸೆಳೆದಿದ್ದಾರೆ.

ದರ್ಶನ್ ಅವರ 51ನೇ ಚಿತ್ರದಲ್ಲಿ ನಾಯಕನಿಗೆ ವಿಲನ್ ಆಗಿ ಧನಂಜಯ್ ನಟಿಸಲಿದ್ದಾರೆ. ಡೈರೆಕ್ಟರ್ ಸ್ಪೆಷಲ್ ಚಿತ್ರದಲ್ಲಿ ನಾಯಕನಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಧನಂಜಯ್ ಹಲವು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಕೆಲವು ಚಿತ್ರಗಳು ಯಶಸ್ವಿ ಕೂಡ ಆಗಿವೆ. ಇದೀಗ ವಿಲನ್ ಪಾತ್ರವನ್ನು ನಿಭಾಯಿಸುವ ಮೂಲಕ ಯಾವುದರಲ್ಲಿ ತಮ್ಮ ವೃತ್ತಿಯನ್ನು ಮುಂದೆ ತೆಗೆದುಕೊಂಡು ಹೋಗುತ್ತಾರೆ ಎಂಬ ಕುತೂಹಲವಿದೆ.

ಪೊನ್ ಕುಮಾರ್ ನಿರ್ದೇಶನದ ದರ್ಶನ್ ಅವರ 51ನೇ ಚಿತ್ರದಲ್ಲಿ ಮೂವರು ವಿಲನ್ ಗಳು. ಧನಂಜಯ್ ಅವರ ಜೊತೆಗೆ ಸಿಂಗಂ ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ಮತ್ತು ರವಿಶಂಕರ್ ಕೂಡ ನಟಿಸಲಿದ್ದಾರೆ. ಫೆಬ್ರವರಿ 19ರಿಂದ ಚಿತ್ರೀಕರಣ ಆರಂಭವಾಗಲಿದ್ದು ಇದೇ 16ರಂದು ದರ್ಶನ್ ಹುಟ್ಟುಹಬ್ಬದ ದಿನ ಚಿತ್ರದ ಶೀರ್ಷಿಕೆಯನ್ನು ಘೋಷಿಸಲು ಚಿತ್ರತಂಡ ನಿರ್ಧರಿಸಿದೆ.

ರಶ್ಮಿಕಾ ಮಂದಣ್ಣ ಮತ್ತು ತನ್ಯಾ ಹೊಪೆ ಈ ಚಿತ್ರಕ್ಕೆ ದರ್ಶನ್ ನಾಯಕಿಯರು. ವಿ.ಹರಿಕೃಷ್ಣ ಅವರ ಸಂಗೀತ, ಶ್ರೀಶ ಕುಡುವಳ್ಳಿ ಅವರ ಛಾಯಾಗ್ರಹಣವಿದೆ.

Facebook Auto Publish Powered By : XYZScripts.com