ಮೂರು ಚಾಲೆಂಜಿಂಗ್​ ಗೆಟಪ್​​​‌ನಲ್ಲಿ ದರ್ಶನ್ ’ಚಕ್ರವರ್ತಿ’

ದರ್ಶನ್ ನಟನೆಯ ಹೊಸ ಸಿನಿಮಾ ಚಕ್ರವರ್ತಿ ಈಗಾಗ್ಲೇ ಭರ್ಜರಿ ಟಾಕ್ ಕ್ರಿಯೇಟ್ ಮಾಡಿದೆ. ಸಿನಿಮಾದ ಫಸ್ಟ್ಲುಕ್ಗೆ ದರ್ಶನ್ ತುಂಬಾನೇ ಖಡಕ್ ಪೋಸ್ ಕೊಟ್ಟಿದ್ರು. ಅಲ್ಲದೆ ದರ್ಶನ್ 60 ದಶಕದ ಪ್ಲೇಮೌತ್ ಕಾರ್ ಜೊತೆ ಕಾಣಿಸಿಕೊಂಡಿದ್ರು. ಹೀಗಾಗಿ ಫಸ್ಟ್ ಲುಕ್ ಪೋಸ್ಟರ್ಗೆ ಭರ್ಜರಿ ಅದ್ಧೂರಿತನ ಸಿಕ್ಕಿತ್ತು. ಇದೀಗ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ.
ವಿಶೇಷ ಅಂದ್ರೆ ಒಂದೇ ಪೋಸ್ಟರ್ನಲ್ಲಿ ದರ್ಶನ್ ಮೂರು ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಗೆಪಟ್ನಲ್ಲಿ ಬಾಕ್ಸಾಫೀಸ್ ದಾದ ಫುಲ್ ಗಡ್ಡದಾರಿಯಾಗಿ ಮಿಂಚಿದ್ದಾರೆ. ಇನ್ನೊಂದು ಗೆಟಪ್ನಲ್ಲಿ ನೀಟ್ ಶೇವ್ ಮಾಡಿ ವೈಟ್ & ವೈಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂರನೇ ಗೆಟಪ್ನಲ್ಲಿ ಚೆಕ್ಸ್ ಶರ್ಟ್ ಲೈಟಾಗಿ ಗಡ್ಡ ಬಿಟ್ಟು ಕಾಣಿಸಿಕೊಂಡಿದ್ದಾರೆ. ಜೊತೆಗೆ ’ರೇರ್ ಕಾಂಬಿನೇಶನ್ ಆಫ್ ಬ್ರೈನ್ & ಕ್ರೈಮ್’ ಅನ್ನುವ ಸಾಲು ಬೇರೆ ಪೋಸ್ಟರ್ನಲ್ಲಿದೆ.
ಇದೇ ಮೊದಲ ಬಾರಿ ದರ್ಶನ್ ನಟನೆಯ ಚಿತ್ರವೊಂದರ ಪೋಸ್ಟರ್ ಇಷ್ಟು ವಿಭಿನ್ನವಾಗಿ ಮೂಡಿ ಬಂದಿದೆ. ಹೀಗಾಗಿ ಚಕ್ರವರ್ತಿ ಚಿತ್ರದ ಈ ಪೋಸ್ಟರ್ ಡಿ ಫ್ಯಾನ್ಸ್ ಕೂತೂಹಲವನ್ನು ಮತ್ತಷ್ಟು ಹೆಚ್ಚೆಸೋದರಲ್ಲಿ ಅನುಮಾನ ಇಲ್ಲ. ಅಂದಹಾಗೆ ಚಕ್ರವರ್ತಿ ಎ ವಿ ಚಿಂತನ್ ನಿರ್ದೇಶನದ ಸಿನಿಮಾ. ದೀಪಾ ಸನ್ನಿಧಿ ಮತ್ತು ಚಾರುಲತ ಚಿತ್ರದ ನಾಯಕಿಯರು. ಮುಂದಿನ ತಿಂಗಳು ಚಿತ್ರದ ಆಡಿಯೋ ರಿಲೀಸ್ ಆಗಲಿದ್ದು, ವರ್ಷದ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com