ಮುಹೂರ್ತಕ್ಕೂ ಮುನ್ನವೇ ದಾಖಲೆ ಬರೆದ ಕೋಟಿಗೊಬ್ಬ 3 .. ಏನದು ದಾಖಲೆ ಇಲ್ಲಿ ಓದಿ

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ -3’ ಚಿತ್ರ ಮಹೂರ್ತಕ್ಕೂ ಮೊದಲೇ ಭಾರೀ ಬೇಡಿಕೆ ಸೃಷ್ಠಿಸಿದೆ.

‘ಕೋಟಿಗೊಬ್ಬ -2’ ಭರ್ಜರಿ ಯಶಸ್ಸಿನ ಬಳಿಕ ಕಿಚ್ಚ ಸುದೀಪ್ ಮತ್ತು ಸೂರಪ್ಪಬಾಬು ಕಾಂಬಿನೇಷನ್ ನಲ್ಲಿ ‘ಕೋಟಿಗೊಬ್ಬ -3’ ಮೂಡಿ ಬರ್ತಿದೆ. ಸಾಲು ಸಾಲು ಚಿತ್ರಗಳಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು, ಹಾಲಿವುಡ್ ಚಿತ್ರಗಳಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

‘ಪೈಲ್ವಾನ್’ಗಾಗಿ ಅವರು ತಯಾರಿ ನಡೆಸಿದ್ದು, ಇದರ ನಡುವೆಯೇ ‘ಕೋಟಿಗೊಬ್ಬ -3’ ಸೆಟ್ಟೇರಲಿದೆ. ಮಾರ್ಚ್ 2 ರಂದು ಚಿತ್ರದ ಮುಹೂರ್ತ ನೆರವೇರಲಿದೆ. ಸೂರಪ್ಪ ಬಾಬು ನಿರ್ಮಿಸಲಿರುವ ಚಿತ್ರವನ್ನು ಶಿವ ಕಾರ್ತಿಕ್ ನಿರ್ದೇಶಿಸಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಆನಂದ್ ಆಡಿಯೋ ಸಂಸ್ಥೆ ‘ಕೋಟಿಗೊಬ್ಬ -3’ ಚಿತ್ರದ ಆಡಿಯೋ ಹಕ್ಕು ಖರೀದಿಸಿದೆ. ಮುಹೂರ್ತಕ್ಕೂ ಮೊದಲೇ ಆಡಿಯೋ ರೈಟ್ಸ್ ಗಳನ್ನು ಆನಂದ್ ಆಡಿಯೋ ಖರೀದಿಸಿರುವುದು ದಾಖಲೆಯಾಗಿದೆ.

Facebook Auto Publish Powered By : XYZScripts.com