ಮುರಿದು ಬಿತ್ತು ರಕ್ಷಿತ್ ಶೆಟ್ಟಿ – ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ! ಕಾರಣ ಏನು ಗೊತ್ತಾ?

ಕಳೆದ ವರ್ಷವಷ್ಟೇ ಎಂಗೇಜ್ ಮೆಂಟ್ ಮಾಡಿಕೊಂಡ ಕಿರಿಕ್ ಪಾರ್ಟಿ ಸಿನಿಮಾದ ಕ್ಯೂಟ್ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಈಗ ಬ್ರೇಕಪ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊನ್ನೆಯಷ್ಟೇ ಬಿಡುಗಡೆಯಾದ ವಿಜಯ್‌ ದೇವರಕೊಂಡ ನಟನೆಯ ‘ಗೀತ ಗೋವಿಂದಂ’ ಸಿನಿಮಾ ರಶ್ಮಿಕಾಗೆ ಸ್ಟಾರ್‌ ಪಟ್ಟ ತಂದುಕೊಟ್ಟಿತು. ಈ ಗೆಲುವೇ ಇಬ್ಬರೂ ದೂರವಾಗುವುದಕ್ಕೆ ಕಾರಣ ಎನ್ನಲಾಗುತ್ತಿದೆ.

ಗೀತ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್‌ ಲಿಪ್‌ಲಾಕ್‌ ಮಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಆವಾಗಲೇ ರಶ್ಮಿಕಾ ಮತ್ತು ರಕ್ಷಿತ್‌ ದೂರವಾಗುತ್ತಿದ್ದಾರೆ ಎಂಬುದರ ಬಗ್ಗೆ ಭಾರಿ ಸುದ್ದಿಯಾಗಿತ್ತು. . ಇದು ಸುಳ್ಳು ಎಂದೇ ಇಬ್ಬರೂ ಹೇಳಿಕೊಂಡಿದ್ದರು. ಆದರೆ, ಈಗ ಎರಡು ಕುಟುಂಬಗಳು ಮಾತನಾಡಿ ನಿಶ್ಚಿತಾರ್ಥ ಕಡಿದುಕೊಳ್ಳುವ ಬಗ್ಗೆ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.

Facebook Auto Publish Powered By : XYZScripts.com