ಮುಖ್ಯ ಮಂತ್ರಿಯನ್ನು ಭೇಟಿಯಾದ ನಟ ಕಿಚ್ಚ ಸುದೀಪ್! ಯಾಕೆ? ಇಲ್ಲಿ ಓದಿ

ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರುವಾಗುತ್ತಿದ್ದ ಹಾಗೇ ನಟ ನಟಿಯರು ರಾಜಕೀಯ ನಾಯಕರುಗಳನ್ನು ಭೇಟಿಯಾಗುತ್ತಿರುವುದು ಇತ್ತೀಚಿನ ದಿವಸದಲ್ಲಿ ಹೆಚ್ಚಾಗುತ್ತಿದೆ. ಅಂದ ಹಾಗೇ ಸ್ಯಾಂಡಲ್‍ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಎರಡನೇ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

ಹೌದು, ಆದರೆ ಅವರು ಭೇಟಿಯಾಗಿರುವುದು ವಿಧಾನಸಭಾ ಚುನಾವಣೆ ಸಲುವಾಗಿಯಲ್ಲ. ಸುದೀಪ್ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ್ದು, ಸ್ಯಾಂಡಲ್‍ವುಡ್ ಕ್ರಿಕೆಟ್ ಟೂರ್ನಿಯ ಸಮಾರೋಪದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಪತ್ರಿಕೆ ನೀಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಸುಮಾರು ಅರ್ಧಗಂಟೆಗಳಿಗೂ ಹೆಚ್ಚು ಕಾಲ ಸುದೀಪ್ ಜೊತೆ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ, ಈ ಎಲೆಕ್ಷನ್‍ನಲ್ಲಿ ನಮ್ಮ ಪರ ಪ್ರಚಾರ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Facebook Auto Publish Powered By : XYZScripts.com